ಪಂಚಭೂತ ತ್ರಿಗುಣವನು ಸಂಚರಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಂಚಭೂತ ತ್ರಿಗುಣವನು ಸಂಚರಿಸಿ ರವಿಶಶಿಯ ಅಂತು ಕೂಡದ ರಜಬೀಜ ಬದ್ಧ ಬಂಧವಾಯಿತ್ತೊ ! ಸಂಗತಿಯಿಲ್ಲದವನಲ್ಲ
ಪವನಗತಿಯ ನಡೆವವನಲ್ಲ. ಭೇದಿಸುತ್ತಿದ್ದಿತು ಲೋಕವೆಲ್ಲ ಆತನ ! ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ ? ಇನ್ನೇನೆಂದು ಉಪಮಿಸುವೆ ಗುಹೇಶ್ವರಾ ಸಿದ್ಧರಾಮನ ನಾಮವನು ?