ಪಂಚಮುದ್ರೆ ಪಂಚಮುದ್ರೆಯೆಂದೇನೋ? ಹೇಳಿಹೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಂಚಮುದ್ರೆ ಪಂಚಮುದ್ರೆಯೆಂದೇನೋ? ಹೇಳಿಹೆ ಕೇಳಿ; ಸರ್ವಾಂಗವನು ಸಮತೆಯೆಂಬ ಸದಾಚಾರದಲ್ಲಿಯೆ ನೆಲೆಗೊಳಿಸಿದ್ದುದೇ ಕಂಥೆಯಯ್ಯ. ಸುಬುದ್ಧಿಯೆಂಬ ಮಕುಟಕ್ಕೆ ಅರುಹೆಂಬ ಬಟ್ಟಪಾವಡೆ
ಕ್ರೀಯೆಂಬ ಪಾಗ. ವಿಚಾರದಿಂದ ಬಳಸಿ ಸುತ್ತಬೇಕು ಕಾಣಿರಣ್ಣ. ದೃಢವೆಂಬ ದಂಡ
ವಿವೇಕವೆಂಬ ಕಪ್ಪರವ ಹಿಡಿಯಬೇಕು ಕಾಣಿರಯ್ಯ. ಜ್ಞಾನವೆಂಬ ಭಸ್ಮಘುಟಿಕೆ ಸುಮನವೆಂಬ ಗಮನ
ಸುಚಿತ್ತವೆಂಬ ಸುಳುಹು
ಪರತತ್ವ ಸದ್ಭಾವದಿಂದ ಪರಮದೇಹಿಯೆಂದು ಸುಳಿವ ಪರದೇಶಿಕನ ತೋರಿ ಬದುಕಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.