ಪಂಚವಿಂಶತಿತತ್ವಾಶ್ರಯವೆಂಬ ಪಟ್ಟಣದೊಳಗೆ ಆರುಬಣ್ಣದ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪಂಚವಿಂಶತಿತತ್ವಾಶ್ರಯವೆಂಬ ಪಟ್ಟಣದೊಳಗೆ ಆರುಬಣ್ಣದ ಪಕ್ಷಿ ಮೂರು ಗೂಡ ಮಾಡಿಕೊಂಡು ನಾಲ್ಕರಾಹಾರವ ಕೊಂಬುವುದ ಕಂಡೆನಯ್ಯ. ಐದರ ನೀರ ಕುಡಿದು ಪರಿಣಾಮಿಸುತ್ತಿದೆ ನೋಡ. ಏಳರ ಮೊಲೆಯನುಂಡು ಎಂಟರಾಭರಣವ ತೊಟ್ಟಿದೆ ನೋಡಾ. ಹತ್ತರ ಬೆಂಬಳಿವಿಡಿದು ಒಂಬತ್ತು ಬಾಗಿಲೊಳಗೆ ನಡೆದಾಡುವದ ಕಂಡೆನಯ್ಯ. ಕೊಂಬುಕೊಂಬಿನಯಿಂಬಿನಲ್ಲಿ ಸುಳಿದಾಡುತ್ತಿದೆ ನೋಡಯ್ಯ. ಆ ಸುಳುಹಿನ ಸೂಕ್ಷ ್ಮವ ತಿಳಿದು ತನ್ನ ಸುಳುಹನರಿವ ಹಿರಿಯರಾರನು ಕಾಣೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.