ಪಂಚಶಕ್ತಿಯನು ಪಂಚಸಾದಾಖ್ಯವನು ಪಂಚಕಲೆಗಳನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಂಚಶಕ್ತಿಯನು ಪಂಚಸಾದಾಖ್ಯವನು ಪಂಚಕಲೆಗಳನು ಪಂಚಾಕ್ಷರಂಗಳನು ಪಂಚಭೂತಾತ್ಮವನು ತನ್ನಲ್ಲಿ ಗರ್ಭೀಕರಿಸಿಕೊಂಡು ತಾನು ಚಿದ್ಭ ್ರಹ್ಮಾಂಡಾತ್ಮಕನಾಗಿ
ಚಿನ್ಮಯನಾಗಿ
ಚಿದ್ರೂಪನಾಗಿ
ಚಿತ್ಪ್ರಕಾಶನಾಗಿ
ಚಿದಾನಂದನಾಗಿ ಸುಖ ದುಃಖ ಮೋಹ ಭಯಂಗಳ ಹೊದ್ದದೆ
ಸರ್ವವ್ಯಾಪಕನಾಗಿ
ಸರ್ವಚೈತನ್ಯಮಯನಾಗಿಪ್ಪ ಪರಂಜ್ಯೋತಿರ್ಲಿಂಗವು ಎನ್ನ ಪ್ರಾಣಲಿಂಗವಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.