ಪಂಚಾಕ್ಷರವೇ ಪಂಚಮುಖವಾಗಿ ಎನ್ನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಂಚಾಕ್ಷರವೇ ಪಂಚಮುಖವಾಗಿ ಎನ್ನ ಪಂಚೇಂದ್ರಿಯಂಗಳಾಗಿಪ್ಪುವು ನೋಡಾ. ಪ್ರಣವವೆ ಪ್ರಾಣಮೂರ್ತಿಯಾಗಿರ್ದೆನಯ್ಯ. ಇದು ಕಾರಣ
ಪರತತ್ವ ಜ್ಞಾನಮಯವಾಗಿ ``ಓಂ ನಮಃಶಿವಾಯ' ಎಂಬ ಶಿವಷಡಕ್ಷರಮಂತ್ರವನೆ ಸ್ಮರಿಸಿ
ಭವಸಾಗರವ ದಾಂಟಿ ಭಕ್ತನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.