ಪಂಚಾಶತ್ಕೋಟಿ ಭೂಮಂಡಲವನು ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು. ತಲೆಯಿಲ್ಲದೆ ಕಂಡು ಬೆರಗಾದೆನು ನವಖಂಡ ಮಂಡಲ ಭಿನ್ನವಾದಂದು_ ಆ ತಲೆಯ ಕಂಡವರುಂಟೆ ಗುಹೇಶ್ವರಾ ?