ಪಕ್ಕವಿಲ್ಲದ ಹಕ್ಕಿ ಮಿಕ್ಕು

ವಿಕಿಸೋರ್ಸ್ದಿಂದ



Pages   (key to Page Status)   


ಪಕ್ಕವಿಲ್ಲದ ಹಕ್ಕಿ ಮಿಕ್ಕು ಮೀರಿ ಹಾರಿಯಾಡುತ್ತಿರಲು
ಹಿಡಿದವರ ಹಿಡಿಯನೊಡೆದು
ಹರಿಯ ಹೃದಯವನೊಡೆದು
ಬ್ರಹ್ಮನ ಬ್ರಹ್ಮಾಂಡವನೊಡೆದು
ರುದ್ರನ gõ್ಞದ್ರವ ಭಸ್ಮವ ಮಾಡಿ
ದ್ವೈತಾದ್ವೈತವೆಂಬ ಮೇಹಕೊಂಡು
ಘನಕ್ಕೆ ಘನವೆಂಬ ಘುಟಿಕೆಯನೆ ನುಂಗಿ
ಇದ್ದುದೆಲ್ಲವಂ ನಿರ್ದೋಷವಂ ಮಾಡಿ ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದಡೆ: ಕೂಡಲಚೆನ್ನಸಂಗಯ್ಯನ ಶರಣರಲ್ಲದೆ ಮತ್ತಾರು ಮತ್ತಾರು ಇಲ್ಲವೆಂದು ಘೂ ಘೂ ಘೂಕೆಂದಿತ್ತು !