Library-logo-blue-outline.png
View-refresh.svg
Transclusion_Status_Detection_Tool

ಪತಿಭಕ್ತೆಯಾದರೆ, ತನ್ನ ಪತಿಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪತಿಭಕ್ತೆಯಾದರೆ
ತನ್ನ ಪತಿಗೆ ಸರ್ವೋಪಚಾರಂಗಳ ಮಾಡಿ ಸಮಸ್ತ ಪದಾರ್ಥವನಾತಂಗೆ ನೀಡಿ ಆತನುಂಡು ಮಿಕ್ಕುದನುಂಬುದೇ ಪತಿವ್ರತಾಭಾವವೆಂಬ ಲೋಕದ ದೃಷ್ಟಾಂತದಂತೆ ಶರಣಸತಿ ಲಿಂಗಪತಿಯೆಂಬುದನು ಗುರೂಪದೇಶದಿಂದರಿದು ಆ ಗುರುವಚನಪ್ರಮಾಣಂಗಳಿಂದವೆ ಸಮಸ್ತ ಪದಾರ್ಥವ ತನ್ನ ಕರಸ್ಥಲದಲ್ಲಿರ್ಪ ಇಷ್ಟಲಿಂಗಕ್ಕೆ ಕೊಟ್ಟು ಕೊಂಬುದೆ ಆಚಾರ. ಇದು ಕಾರಣ
ಇಷ್ಟಲಿಂಗಕ್ಕೆ ಕೊಡದೆ ಅಂತರಂಗದಲ್ಲಿ ಪ್ರಾಣಲಿಂಗವುಂಟೆಂದು ಮನಕ್ಕೆ ಬಂದಂತೆ ತಿಂಬ ಶ್ವಾನಜ್ಞಾನಿಗಳಿಗೆ ನಾಯಕನರಕ ತಪ್ಪದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.