ಪದಬಂಧ ರಚನೆಯಲ್ಲಿ ಲಿಮ್ಕಾ ದಾಖಲೆ

ವಿಕಿಸೋರ್ಸ್ ಇಂದ
Jump to navigation Jump to search

ಕನ್ನಡ ಪದಬಂಧ ರಚನೆಕಾರರಾದ ಅ.ನಾ.ಪ್ರಹ್ಲಾದರಾವ್ ಭಾರತೀಯ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಪದಬಂಧ ರಚನೆಕಾರರಾಗಿ ಹೊರ ಹೊಮ್ಮಿದ್ದು, ಅವರ ಹೆಸರು ಲಿಮ್ಕಾ 2016ರ ದಾಖಲೆ ಪುಸ್ತಕದಲ್ಲಿ ಮುಂದುವರೆದಿದೆ. 2015ರಲ್ಲಿಯೂ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಇವರ ಹೆಸರು ನಮೂದುಗೊಂಡಿತ್ತು. ಅ.ನಾ.ಪ್ರಹ್ಲಾದರಾವ್ 1984ರಲ್ಲಿ ಪದಬಂಧ ಬರೆಯುವ ಹವ್ಯಾಸದಲ್ಲಿ ತೊಡಗಿಕೊಂಡರು. 2015ರ ಜೂನ್ ಅಂತ್ಯದವರೆವಿಗೆ ಕನ್ನಡದ 43 ಪತ್ರಿಕೆಗಳಿಗೆ 30,263 ಪದಬಂಧಗಳನ್ನು ರಚಿಸುವ ಮೂಲಕ ಇಡೀ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ರಚಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಭಾರತೀಯ ಭಾಷೆಗಳಲ್ಲಿ ಪದಬಂಧ ರಚನೆಯ ಕ್ಷೇತ್ರದಲ್ಲಿ ಕನ್ನಡ ಭಾಷೆ ಮುಂಚೂಣಿಯನ್ನು ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಗರಿ ಮೂಡಿದಂತಾಗಿದೆ. 2006ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಇವರ 5 ಪದಬಂಧ ಪುಸ್ತಕಗಳು ಪ್ರಕಟಗೊಂಡವು. 2013ರಲ್ಲಿ 2 ಹಾಗೂ 2016ರಲ್ಲಿ 5 ಪದಬಂಧ ಪುಸ್ತಕಗಳನ್ನು ವಸಂತ ಪ್ರಕಾಶನ ಪ್ರಕಟಿಸಿದೆ.