ಪರಂತಪ ವಿಜಯ ೨/ಅಧ್ಯಾಯ ೧೧

ವಿಕಿಸೋರ್ಸ್ ಇಂದ
Jump to navigation Jump to search

೮೯
ಅಧ್ಯಾಯ ೯

ಕಲಾವತಿ- ನೀನು ಪರಮನೀಚನು. ನಾನು ನಿನ್ನ ಮಾತನ್ನು ಕೇಳತಕ್ಕವಳಲ್ಲ. ಈ ಕಾಗದ ಪತ್ರಗಳನ್ನು ಕೊಟ್ಟು ಇಲ್ಲಿಂದ ತೆರಳಿದರೆ ಸರಿ; ಇಲ್ಲ ದ ಪಕ್ಷದಲ್ಲಿ, ನನ್ನ ಕೆಲಸವನ್ನು ನಾನು ಮಾಡುವೆನು.

ಶಂಬರ -ಎಲೈ ನೀಚಳೇ! ಕಾಗದಗಳು ನಿನ್ನವಲ್ಲ; ಅವು ನನ್ನವು.

ಕಲಾವತಿ -ಸಾಮಾನ್ಯರಾದ ಕಳ್ಳರು ತಾವು ಅಪಹರಿಸಿದ ಪದಾರ್ಥಗಳನ್ನು ತಮ್ಮವೆಂದು ಹೇಳಿಕೊಳ್ಳುವುದು ಅಪೂರ್ವ, ನೀನು ಸಾಮಾನ್ಯನಾದ ಕಳ್ಳನಲ್ಲ; ನಿನ್ನನ್ನು ಚೋರಶಿಖಾಮಣಿಯೆಂದೇ ಹೇಳಬಹುದು. ವ್ಯರ್ಥವಾದ ಮಾತುಗಳನ್ನು ಏತಕ್ಕೆ ಆಡುವೆ? ಆ ಕಾಗದಗಳನ್ನು ಕೆಳಗೆ ಹಾಕಿದರೆ ಸರಿ; ಸಾವಕಾಶ ಮಾಡಿದರೆ, ಪಿಸ್ತೂಲನ್ನು ಹಾರಿಸಿ ನಿನ್ನನ್ನು ಈ ಕ್ಷಣದಲ್ಲಿಯೇ ಯಮಪುರಿಗೆ ಕಳುಹಿಸುವೆನು.
  

ಇವಳ ಸ್ಥೈರ್ಯವನ್ನು ನೋಡಿ, ಸಾವಕಾಶ ಮಾಡಿದರೆ ಕೊಲ್ಲುವಳೆಂದು ತಿಳಿದುಕೊಂಡು, ಶಂಬರನು ಕಾಗದ ಪತ್ರಗಳನ್ನು ಅವಳ ಕಾಲಿನ ಬಳಿಯಲ್ಲಿಟ್ಟು, ವಿನೀತನಾಗಿ ಹೊರಟು ಹೋಗುವಂತೆ ಅಭಿನಯಿಸಿದನು. ಕಲಾವತಿಯು ಪಿಸ್ತೂಲನ್ನು ಒಂದು ಕೈಯಲ್ಲಿಟ್ಟುಕೊಂಡು, ಮತ್ತೊಂದು ಕೈಯಲ್ಲಿ ಆ ಕಾಗದಗಳನ್ನು ತೆಗೆದುಕೊಂಡು, ಅವುಗಳು ಯಾವ ವಿಷಯವಾದ ಕಾಗದಗಳೋ ಎಂದು ನೋಡುತಿದ್ದಳು.

ಶಂಬರ- ಕಲಾವತಿ! ಇನ್ನಾದರೂ ಕೋಪವನ್ನು ಬಿಡು. ನಿನ್ನ ತಂದೆಯು ಉಯಿಲಿನಲ್ಲಿ ನನಗೆ ಯಾವ ಆಸ್ತಿಯನ್ನು ಕೊಟ್ಟಿರುತ್ತಾನೆ?

ಕಲಾವತಿ- ನಿನಗೆ ಆಸ್ತಿಯೆಲ್ಲಿಯದು? ನೀನು ಉಲ್ಲಂಘಿಸಿರತಕ್ಕ ಷರತ್ತನ್ನು ನೆರವೇರಿಸಿದ ಪಕ್ಷದಲ್ಲಿ, ಎಲ್ಲಾ ಆಸ್ತಿಯನ್ನೂ ನಿನಗೇ ಬಿಟ್ಟಿರುತ್ತಾನೆ.

ಶಂಬರ-ಅದು ಯಾವ ಷರತ್ತು ?

ಕಲಾವತಿ-ದುರಾತ್ಮರಿಗೆ, ಆಡಿದ ಮಾತೂ, ಮಾಡಿದ ಪ್ರತಿಜ್ಞೆಗಳೂ ಎಂದಿಗೂ ಜ್ಞಾಪಕವಿರುವುದಿಲ್ಲ.

ಶಂಬರ-ನಿನ್ನನ್ನು ಮದುವೆಮಾಡಿಕೊಂಡರೆ ತನ್ನ ಆಸ್ತಿಗೆ ನಾನು ಅರ್ಹನೆಂದು ಬರೆದಿರುತ್ತಾನೋ ?


೯೦
ಪರಂತಪ ವಿಜಯ

ಕಲಾವತಿ- ನನ್ನನ್ನು ನೀನು ಮದುವೆ ಮಾಡಿಕೊಂಡರೆ, ನನ್ನ ತಂದೆಯ ಆಸ್ತಿಯಲ್ಲಿ ಅರ್ಧ ಆಸ್ತಿಯು ನಿನಗೆ ಬರುವುದು. ತಿರಸ್ಕರಿಸಿದರೆ ನಿನಗೆ ಒಂದು ಕಾಸೂ ಬರುವುದಿಲ್ಲ.
ಶಂಬರ- ನಿನ್ನ ತಂದೆಯು ಈ ರೀತಿಯಲ್ಲಿ ಎಂದಿಗೂ ಏರ್ಪಾಡು ಮಾಡಿರಲಾರನು. ಅವನು ಬರೆದಿರತಕ್ಕ ಉಯಿಲನ್ನು ನಾನು ಪ್ರತ್ಯಕ್ಷ ವಾಗಿ ನೋಡಿದ ಹೊರತು, ನಿನ್ನ ಮಾತನ್ನು ನಾನು ನಂಬಲಾರೆನು. ಅದು ಹಾಗಿರಲಿ; ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವೆನೆಂಬ ಆಶೆಯನ್ನು ಬಿಡು. ಪ್ರಪಂಚದಲ್ಲಿ ನನಗೆ ಅನುರೂಪಳಾದ ಸ್ತ್ರೀರತ್ನವು ಒಬ್ಬಳೆ ಒಬ್ಬಳು. ಅವಳೇ ಕಾಮಮೋಹಿನಿಯು.
ಕಲಾವತಿ- ಕಾಮಮೋಹಿನಿಯನ್ನು ಮದುವೆ ಮಾಡಿಕೊಳ್ಳತಕ್ಕ ಆಶೆಯನ್ನು ನೀನು ಬಿಡು. ಅವಳು ತನಗೆ ಅನುರೂಪನಾದ ಸತಿಯನ್ನು ವರಿಸಿರುವಳು. ಅವರಿಗೆ ವಿವಾಹವು ಪೂರಯಿಸಿರುವುದು.
ಶಂಬರ- ವ್ಯರ್ಥವಾದ ಮಾತುಗಳನ್ನು ಏತಕ್ಕೆ ಅಡುವೆ ? ಕಾಮಮೋಹಿನಿಯು ನನ್ನ ಕರಗತಳಾಗಿರುತ್ತಾಳೆ. ಆ ಚಂಡಾಲನಾದ ಪರಂತಪನ ಅವತಾರವು ಒಂದು ನಿಮಿಷದಲ್ಲಿ ಪೂರಯಿಸುವುದು, ಕಾಮಮೋಹಿನಿಯು ನನ್ನ ದಾಸಿಯಾಗಿಯಯೂ ನಾಯಕಿಯಾಗಿಯೂ ಇರುವಳು.
ಕಲಾವತಿ- ಹಾಗೋ? ನಿನ್ನ ಬಡಾಯಿಯನ್ನು ನೋಡಿದರೆ, ನೀನು ಪರಂತಪನನ್ನು ಖೂನಿಮಾಡಿರಬಹುದೆಂದು ತೋರುತ್ತದೆ.
ಶಂಬರ- ಪರಂತಪನು ಶೀಘ್ರದಲ್ಲಿ ದೇಹತ್ಯಾಗವನ್ನೇ ಮಾಡಬಹುದು. ಅಥವಾ, ಜೀವಂತನಾಗಿದ್ದಾಗ್ಯೂ, ನನಗೂ ಕಾಮಮೋಹಿನಿಗೂ ಶೀಘ್ರದಲ್ಲಿ ಉಂಟಾಗತಕ್ಕ ಸಂಬಂಧವನ್ನು ತಪ್ಪಿಸುವುದಕ್ಕೆ ಅವನಿಗೆ ಸ್ವಲ್ಪವೂ ಶಕ್ತಿಯಿರುವುದಿಲ್ಲ.
   ಈ ಮಾತನ್ನು ಕೇಳಿದಕೂಡಲೆ, ಕಲಾವತಿಗೆ ಬಹಳ ಕೋಪವುಂಟಾಯಿತು. ಈ ದುರಾತ್ಮನನ್ನು ಕೊಲ್ಲೋಣವೇ ಬೇಡವೇ ಎಂದು ಯೋಚಿಸುತಿದ್ದಳು.

ಕಲಾವತಿ- ಎಲಾ ದುರಾತ್ಮನಾದ ಶಂಬರನೇ! ನನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ವಂಚಿಸಿದ್ದೀಯೆ. ನೀನು ಮಹಾ
೯೧
ಅಧ್ಯಾಯ ೧೨ಪಾಪಿ ನಿನ್ನಲ್ಲಿ ಸ್ವಲ್ಪವೂ ಅನುರಾಗವಿಲ್ಲದಿರತಕ್ಕ ಪರಸ್ತ್ರೀಯಾದ ಕಾಮಮೋಹಿನಿಯ ಗಂಡನನ್ನು ಸಂಹರಿಸಿ ಅವಳನ್ನು ಕೆಡಿಸಬೇಕೆಂಬ ಉದ್ಯೋಗದಲ್ಲಿ ಇರುತ್ತಿಯೆ. ಇದು ಘೋರವಾದ ಪಾಪಕೃತ್ಯವು, ಕಾಮಮೋಹಿನಿಯು ಪ್ರಾಣವನ್ನಾದರೂ ಬಿಡುವಳೆ ಹೊರತು, ನಿನ್ನಂಥ ದುರಾತ್ಮನನ್ನು ದೃಷ್ಟಿಸಿ ಕೂಡ ನೋಡಳು. ನಿನ್ನಂಥ ಚಂಡಾಲನಿಗೆ, ಪರಿಶುದ್ಧಳಾಗಿಯೂ ಪತಿವ್ರತಾ ಶಿರೋಮಣಿಯಾಗಿಯೂ ಇರುವ ಕಾಮಮೋಹಿನಿಯು ಹೆಂಡತಿಯಾಗುವಳೆ ? ಅತ್ಯುತ್ಕಟವಾದ ಪಾಪಗಳಿಗೆ ಪ್ರತೀಕಾರವು ಈ ಜನ್ಮದಲ್ಲಿ ಬಹಳ ಶೀಘ್ರದಲ್ಲಿಯೇ ಸಂಭವಿಸಬಹುದೆಂದು ಮಹಾಪುರುಷರು ಹೇಳುತ್ತಾರೆ. ನಿನ್ನ ಪಾಪಕರ್ಮಗಳ ಫಲವನ್ನು ನೀನು ಅನುಭವಿಸದಿರು ವುದಕ್ಕಾಗುವುದಿಲ್ಲ. ನಿನ್ನಂಥ ದುರಾತ್ಮನನ್ನು ಕೊಲ್ಲುವುದು ಪುಣ್ಯಕರವಾದುದು. ಕಾಮಮೋಹಿನಿಯನ್ನು ಕೆಡಿಸುವುದಕ್ಕೆ ನಿನಗೆ ಅವಕಾಶವಿಲ್ಲದಂತೆ, ಇಲ್ಲಿಯೆ ನಿನ್ನನ್ನು ಯಮಪುರಿಗೆ ಕಳುಹಿಸುವೆನು.
ಅವಳು ಪಿಸ್ತೂಲಿನಿಂದ ಅವನನ್ನು ಹೊಡೆಯಬೇಕೆಂದು ಪ್ರಯತ್ನ ಮಾಡುವುದರೊಳಗಾಗಿಯೇ, ಶಂಬರನು ಏಟು ತಿಂದ ಹುಲಿಯಂತೆ ನುಗ್ಗಿ, ಅವಳನ್ನು ಕೆಡವಿ, ಪಿಸ್ತೂಲನ್ನು ಅವಳ ಕೈಯಿಂದ ಕಿತ್ತುಕೊಂಡು, ಅವಳ ಕತ್ತನ್ನು ಕಿವಿಚಿದನು. ಅವಳು ಉಸಿರು ಸಿಕ್ಕಿಕೊಂಡು ಸತ್ತಂತೆ ಬಿದ್ದಳು. ಅಲ್ಲಿಂದ ಕಾಗದ ಪತ್ರಗಳನ್ನು ತೆಗೆದುಕೊಂಡು ಶಂಬರನು ಹೊರಟು ಹೋದನು.


ಅಧ್ಯಾಯ ೧೨

ರಂತಪನು ರತ್ನಾಕರಕ್ಕೆ ಹೊರಟುಹೋದ ರಾತ್ರಿ ಕಾಮಮೋಹಿನಿಯು, ತನ್ನ ಗಂಡನಿಗೆ ಏನು ಅನರ್ಥಗಳುಂಟಾಗುವುವೋ ಎಂದು, ಅಸಾಧಾರಣವಾದ ಭಯದಿಂದ ಪೀಡಿತಳಾಗಿದ್ದಳು. ಬೆಳಗಾಗುತ್ತಲೂ ನನ್ನ ಗಂಡನು ಬರುವನೆಂದು, ಅವನ ಆಗಮನವನ್ನು ನಿರೀಕ್ಷಿಸುತ್ತ ಇದ್ದಳು. ಸೂರ್ಯೋದಯವಾಯಿತು. ಸೂರ್ಯನು ನೆತ್ತಿಯ ಮೇಲಕ್ಕೆ ಬಂದನು. ಪರಂತಪನು ಮಾತ್ರ