ಪರಧನವ ಪರಹಿಂಸೆಯ ಹಿಡಿಯದೆ,
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪರಧನವ ಹಿಡಿಯದೆ
ಪರಸ್ತ್ರೀಯರ ಮುಟ್ಟದೆ
ಪರದೈವವ ಪೂಜಿಸದೆ
ಪರಹಿಂಸೆಯ ಮಾಡದೆ
ಪರಲೋಕದ ಫಲಪದವ ಬಯಸದೆ
ಪರನಿಂದೆಯ ಕೇಳದೆ
ಗರ್ವಾಹಂಕಾರದಲ್ಲಿ ಬೆರೆಯದೆ
ಕರಣಾದಿ ಗುಣಂಗಳಲ್ಲಿ ಹರಿಯದೆ
ಗುರುಭಕ್ತಿ ಲಿಂಗಪೂಜೆ ಜಂಗಮದಾಸೋಹವ ಮರೆಯದೆ
ಸತ್ಯಸದಾಚಾರವ ತೊರೆಯದೆ
ಸರ್ವಾಚಾರಸಂಪನ್ನನಾದ ಮಹಾತ್ಮನೆ ಅನಾದಿಗುರುಪಟ್ಟಕ್ಕೆ ಯೋಗ್ಯನು. ಆ ಮಹಾತ್ಮನೆ ಪರಮಘನಲಿಂಗದೇವರೆಂಬೆನು ಆ ಮಹಾತ್ಮನೆ ಭವಕೆ ಘನವಾದ ಮಹಾಘನ ಪರಶಿವಮೂರ್ತಿಯೆಂಬೆನಯ್ಯಾ ಅಖಂಡೇಶ್ವರಾ.