Library-logo-blue-outline.png
View-refresh.svg
Transclusion_Status_Detection_Tool

ಪರಧನ ಪರಸತಿ ಪರವಾರ್ತೆಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣವಿರೋಧಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಕೂಡಲಚೆನ್ನಸಂಗಯ್ಯನಲ್ಲಿ
ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ