Library-logo-blue-outline.png
View-refresh.svg
Transclusion_Status_Detection_Tool

ಪರಬೊಮ್ಮವೆ ಶರಣನ ಶಿರದರಮನೆಯಿಂದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ ಗುರುಕೃಪೆಯಿಂದ ಲಿಂಗಮೂರ್ತಿಯಾಗಿ ಬಿಜಯಂಗೈದಿರ್ಪುದು ಕಂಡಾ ! ಅದು ಕಾರಣ ಶರಣಂಗೆಯೂ ಲಿಂಗಕ್ಕೆಯೂ ಭೇದಾಭೇದ ಸಂಬಂಧವಿರ್ಪುದು ಕಂಡಾ ! ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು
ಲಿಂಗವು ಕೈಲಾಸದ ಶಿವನ ಕುರುಹಾದುದರಿಂದ ಪೂಜ್ಯವೆಂಬರು; ಶರಣನು ಮನುಜನಾದುದರಿಂದ ಅವನು ಪೂಜಕನೆಂಬರು. ಇಂತೀ ಕೇವಲ ಭೇದಸಂಬಂಧ ಕಲ್ಪಿಸುವ ಭವಭಾರಿಗಳು ಶಿವಾದ್ವೈತಕ್ಕೆ ದೂರವಾಗಿಪ್ಪರು ಕಂಡಾ ! ಅರೆಯರುವಿನ ನರಜೀವಿಗಳು ಶರಣರ ಸಾಮರಸ್ಯಕ್ಕೆ ಹೊರಗಾಗಿರ್ಪರು ಕಂಡಾ
ಕೂಡಲಚೆನ್ನಸಂಗಮದೇವಾ !