ಪರಮಪ್ರಭುವೇ, ನೀ ಮುನಿದೆನ್ನ
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪರಮಪ್ರಭುವೇ
ನೀ ಮುನಿದೆನ್ನ ಮತ್ರ್ಯಲೋಕದೊಳಗಿರಿಸಿದಡೆ ಆನು ಸೈರಿಸಿದೆನಯ್ಯಾ
ಕುಲಮದ ಛಲಮದವಿದೇನಯ್ಯಾ ದರುಶನಭ್ರಾಂತಿಯಿದೇನಯ್ಯಾ ! ಕ್ರಿಯಾಕರ್ಮಸೂತಕವಿದೇನಯ್ಯಾ ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ ತ್ರೈಲೋಕ್ಯಾಕರ್ಷಣಕ್ಷಮಃ ತಥಾಪಿ ಲೌಕಿಕಾಚಾರಂ ಮನಸಾಪಿ ನ ಲಂಘಯೇತ್ ಇಂತೆಂಬುದ ಮೀರಿದೆನಾಗಿ
ಲಿಂಗಯ್ಯಾ ನಿಮ್ಮ ನಂಬಿದೆನಯ್ಯಾ. ಇನ್ನು ಕಲಿಯುಗದಲ್ಲಿ ಬಳಸಿದಡೆ ಕೂಡಲಸಂಗಮದೇವಾ
ನಿಮ್ಮ ರಾಣಿವಾಸದಾಣೆ.