Library-logo-blue-outline.png
View-refresh.svg
Transclusion_Status_Detection_Tool

ಪರಮಸುಖದ ಪರಿಣಾಮದ ಇರವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಮಸುಖದ ಪರಿಣಾಮದ ಇರವ ಬಲ್ಲವರಾರೊ? ಅದು ದೊರಕೊಳ್ಳದು ನೋಡಾ ! ತನತನಗೆ ತನ್ನ ಇರವ ಲಿಂಗದಲ್ಲಿರಿಸಿ
ಪರವ ಮನದಲ್ಲಿ ಹಿಡಿದು ಇಹ ಪರವೆಂಬುದೊಂದು ಭ್ರಾಂತಳಿದು
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.