Library-logo-blue-outline.png
View-refresh.svg
Transclusion_Status_Detection_Tool

ಪರಮೂತ್ರದ ಕುಳಿಯನಗುಳುವಂಗೆ ಚಿಲುಮೆಯಗ್ಗಣಿಯೆಂಬ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಮೂತ್ರದ ಕುಳಿಯನಗುಳುವಂಗೆ ಚಿಲುಮೆಯಗ್ಗಣಿಯೆಂಬ ಕಟ್ಟಳೆ ಏತಕಯ್ಯಾ ? ಪರನಾರಿಯರ ಅಧರಪಾನವ ಕೊಂಬವಂಗೆ ಸ್ವಯಪಾಕದ ಕಟ್ಟಳೆ ಏತಕಯ್ಯಾ ? ದುಷ್ಟಸ್ತ್ರೀಯರನಾಳಿಪ್ಪಂಗೆ ಗುರುವಿನ ಪ್ರಸಾದವಿಲ್ಲ
ಬೆಕ್ಕ ಸಲಹಿಪ್ಪಂಗೆ ಲಿಂಗದ ಪ್ರಸಾದವಿಲ್ಲ
_ ಇಂತೀ ತ್ರಿವಿಧವ ಸಲಹಿದ ದ್ರೋಹಿಗೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.