ವಿಷಯಕ್ಕೆ ಹೋಗು

ಪರಶಕ್ತಿ ಬಂದು ಪಶುಪತಿಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಪರಶಕ್ತಿ ಬಂದು ಪಶುಪತಿಯ ನೆರೆಯಲು ಅತಿಶಯನೊಬ್ಬ ಉದಯವಾದನು. ಆತ ಆದಿ ಶರಣನು. ಪಶು ಪಾಶ
ಮಲ ಮಾಯ ಕರ್ಮವನೆಂದೆಂದೂ ಹೊದ್ದದ ಅನಾದಿ ನಿರ್ಮಲನು ನೋಡಾ ಲಿಂಗ ಶರಣನು. ಆದಿ ಅನಾದಿಯಿಂದತ್ತತ್ತ ತಾನಾದ ಪರಾಪರನು ನಿಜಲಿಂಗೈಕ್ಯನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.