ಪರಶಿವನು ಪರಮಪುರುಷನಾಗಿಪ್ಪನು ನೋಡಾ. ಈ ಪುರುಷಪದವು ಶಿವಂಗಲ್ಲದೆ ಮಿಕ್ಕ ದೈವಂಗಳಿಗಿಲ್ಲ ನೋಡಾ. ಆ ಪರಶಿವನು ಗುರುಲಿಂಗಜಂಗಮವೆಂಬ ಮೂರು ಪಾದಂಗಳಿಂದುತ್ಕೃಷ್ಟವಾಗಿ ಉದಯಿಸಿ ಜಗದುದ್ಧಾರಂಗೆಯ್ಯುತಿಪ್ಪನು ನೋಡಾ
`ತ್ರಿಪಾದೂಧ್ರ್ವಂ ಉದೈತ್ಪುರುಷಃ' ಎಂದುದಾಗಿ ಇಂತಪ್ಪ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಪಡೆಯಲರಿಯದೆ ಇಳೆಯ ಮೇಲಿನ ಹಲವು ಜಲಂಗಳಿಗೆ ಹರಿದು
ಬಳುಲಿ ಬಾಯಾರ ನರರೆಲ್ಲರು ತೊಳಲುತಿಪ್ಪರು ನೋಡಾ. ಕೂಡಲಚೆನ್ನಸಂಗಮದೇವಾ. ಇಂತಿದರ ಭೋದವನರಿದು ನಮ್ಮ ಶರಣರು ತ್ರಿವಿಧ ಪಾದೋದಕ ಪ್ರಸಾದವ ಸವಿದು ಚಿರಸುಖಿಯಾಗಿಪ್ಪರು.