ಪರಸ್ತ್ರೀಯರ ಮುಟ್ಟದಿರಬೇಕು. ಪರಧನವನಪಹರಿಸದಿರಬೇಕು. ಪರದೈವವ ಪೂಜಿಸದಿರಬೇಕು. ಪರಹಿಂಸೆಯ ಮಾಡದಿರಬೇಕು. ಪರಲೋಕದ ಫಲಪದವ ಬಯಸದಿರಬೇಕು. ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷೆ*ಬಲಿದಿರಬೇಕು. ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ. ಅದೆಂತೆಂದೊಡೆ : ``ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್