ವಿಷಯಕ್ಕೆ ಹೋಗು

ಪರುಷದ ಅರಸಿಂಗೆ ಕಬ್ಬುನದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಪರುಷದ ಅರಸಿಂಗೆ ಕಬ್ಬುನದ ಪರಿವಾರದಂತೆ
ಮುನಿದೊಮ್ಮೆ ಮುಟ್ಟಿದರೂ ಸುವರ್ಣವಾಗುವುದು ತಪ್ಪದು
ಸ್ನೇಹದಿಂದ ಮುಟ್ಟಿದರೂ ಸುವರ್ಣವಾಗುವುದು ತಪ್ಪದು. ಪರುಷ ಲೋಹದ ಸಂಗದಂತೆ ಕೂಡಲಚೆನ್ನಸಂಗನ ಶರಣರ ಸನ್ನಿಧಿ.