ವಿಷಯಕ್ಕೆ ಹೋಗು

ಪರುಷದ ಪುತ್ಥಳಿಗೆ ಲೋಹದ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪರುಷದ ಪುತ್ಥಳಿಗೆ ಲೋಹದ ಶೃಂಗಾರವೇತಕೊ ? ``ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ಎಂಬ ಭ್ರಾಂತೇಕೋ ? ಲಿಂಗಮಧ್ಯೆ ಜಗತ್ಸರ್ವವಾದರೆ
ಈ ಆತ್ಮಂಗೆ ಹಿಂದಣುತ್ಪತ್ಯ ಸ್ಥಿತಿಲಯಂಗಳೆಂತಾದವು ? ಲಿಂಗ ಲಿಂಗದಂತೆ ಜಗ ಜಗದಂತೆ ಲಿಂಗವನೊಳಗುಮಾಡಿ
ಜಗವ ಹೊರಗು ಮಾಡಬಲ್ಲನೆಮ್ಮ ಶರಣ
ಗುಹೇಶ್ವರ ನೀನೇ ತಾನು.