ಪರುಷವ ಬಂಧನಕ್ಕೆ ತಂದಿರಿಸಿಕೊಂಡಾತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪರುಷವ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ
ಅತೀತನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ
ಆನಂದನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ
ಬ್ರಹ್ಮನಿದ್ದಲ್ಲಿ ಪರುಷವನಿರಿಸಿದೆ
ವಿಷ್ಣುವಿದ್ದಲ್ಲಿ ಅತೀತವನಿರಿಸಿದೆ
ರುದ್ರನಿದ್ದಲ್ಲಿ ಆನಂದವನಿರಿಸಿದೆ
ಈ ತ್ರಿವಿಧಧ್ಯಾನವರ್ಣನೆ ನಷ್ಟವಾದ ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳ ಬಸವಣ್ಣನೆಂಬೆರಡು ಶಬ್ದಪ್ರಸಾದವೆನಗದೆ ಅರವಟ್ಟಿತ್ತು.