ವಿಷಯಕ್ಕೆ ಹೋಗು

ಪಶುವನೇರಿದ ಕೋಣ ಶಿಶುವೇಧೆಗಾರ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಪಶುವನೇರಿದ ಕೋಣ ಶಿಶುವೇಧೆಗಾರ ನೋಡಾ. ಪಶುವಿನ ಒಡೆಯ ಬಂದು ಕೋಣನನೆಬ್ಬಟ್ಟಲು ಶಿಶುವಿನ ವೇದನೆ ಮಾಯಿತ್ತು ನೋಡಾ. ಶಿಶುವೆದ್ದು ತನ್ನ ತಾಯನಪ್ಪಲು ತಾಯಿ ತಂದೆಯನೊಡಗೂಡಿ ನಿಂದ ನಿಲುವು ತಾನೊಂದೇ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.