ಪಿಂಡದೊಳಗೊಂದು ಅಖಂಡಜ್ಯೋತಿಯನೊಡಗೂಡಿ ಅಖಂಡಜ್ಯೋತಿ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪಿಂಡದೊಳಗೊಂದು ಅಖಂಡಜ್ಯೋತಿ ಥಳಥಳಿಸಿ ಬೆಳಗುತಿರ್ಪುದು ನೋಡಾ. ಆ ಅಖಂಡಜ್ಯೋತಿಯನೊಡಗೂಡಿ ಅವಿರಳ ಶಿವಯೋಗಿಯಾದೆನಾಗಿ
ಪಿಂಡದ ಖಂಡಿತವು ಕಡೆಗಾಯಿತ್ತು ನೋಡಾ ಅಖಂಡೇಶ್ವರಾ.