ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ ನೋಡಾ. ಪಿಂಡವೆ ಕುಂಡಲಿಯ ಶಕ್ತಿ ಪದವೆ ಹಂಸನ ಚರಿತ್ರ ಬಿಂದು ಅನಾಹತವೆಂದರಿದು_ಗುಹೇಶ್ವರಲಿಂಗವ ಕೂಡಿದೆನು.