ಕಾನೀ | ದೇಖಿಸಭಾ ಉಧರೀಛತಿಯಾ ಕವಿಸತ್ಯ ಕಥೈ ಮನಸಾಲ
ಲಚಾನೀ : ಹಾಥವಿನಾ ಪಛಿತಾತರಹೀ ಇಹಿಕಾರಣ ಡೊಲಮೆಹಾ
ಲತವಾನೀ ||
ಬಾದಶಹನು ಈ ಕವನವನ್ನು ಕೇಳಿ ಬಹುಪ್ರಸನ್ನ ನಾದನು.
-(೪೧. “ ಕನಿಸ್ಯೋರವಿ ಘೋಡ ಪಹಾಡಕೆ ತಾಈ ")
ಬಾದಶಹನು ಒಂದು ದಿವಸ ಒಂಟಿಗನಾಗಿ ಯಮುನಾ ತಟಾಕಕ್ಕೆ ಸಂಚಾ
ರಾರ್ಥವಾಗಿ ಹೋಗಿದ್ದನು, ಅಲ್ಲಿ ಒಬ್ಬಸುಂದರ ತರುಣಿಯು ತನ್ನ ಮೈಮೆಲಿನ ವಸ್ತ್ರಗಳನ್ನೆಲ್ಲ ತೆಗೆದಿಟ್ಟು ಒಂದು ಧೋತರವನ್ನುಟ್ಟುಕೊಂಡು ಸ್ನಾನಾರ್ಥವಾಗಿ ನದಿಯ ಪಾತ್ರೆಯಲ್ಲಿಳಿದು ಅವಗಾಹನ ಸ್ನಾನವನ್ನು ಮಾಡಿದಳು. ನೀರೊಳಗೆ ಮುಳುಗಿ ಮೇಲಕ್ಕೆದ್ದ ಕೂಡಲೆ ಅವಳ ಮುಂಗುರುಳುಗಳು
ಮೊರೆಯನ್ನು ಆವರಿಸಿಕೊಂಡಿದ್ದವು. ಅದರಿಂದ ಅವುಗಳನ್ನು ಅವಳು ತನ್ನ
ಎರಡೂಕೈಗಳಿಂದ ಹಿಂದಕ್ಕೆ ಸರಿಸಿಕೊಂಡಳು, ಅದನ್ನು ನೋಡಿ ಬಾದಶಹನು ಒಂದು ಸಮಸ್ಯೆಯನ್ನು ರಚನಾ ಮಾಡಿಕೊಂಡು ಸಭೆಗೆ ಬಂದ ಕೂಡಲೇ ಬೀರಬಲನನ್ನು ಕರೆದು ಈ ನಿಕಸ್ಯೂರವಿ :ಘೋಡ ಪಹಾಡಕೆ ತಾಈ
ಎಂದು ಹೇಳಿ ಇದನ್ನು ಪೂರ್ಣಮಾಡು ! ಎಂದು ಆಜ್ಞಾಪಿಸಿದನು; - ಆಗ
ಬೀರಬಲನು
ರಾತನಮೈ ರಸಕೇಲಿಕಿಯೋ ಅರುಭೋರಭಯೆ ಊಮಜ್ಜನ ಧಾಈ
ನೀರಕೆಛೀರಮೆ ದೈಡುಬಕೀ ಯಮುನಾಜಲಮೆ ಜನಚಂದ್ರಿಕಾಛಾಈ
ಲೈಡುಬಕೀ ಜಲಸೋ ನಿಕಸಿ ಉರಝೀ ಅಲಕೈಮುಜದೈ ಛಿತರಾಈ
ದೋಊ ಕರಕೇಶ ಸಮಾರಲಿಯೆ ನಿಕಸ್ಯೋರವಿಘೋಡ ಪಹಾಡಕೆತಾಈ||
ಈ ಪದ್ಯವನ್ನು ಕೇಳಿದ್ದರಿಂದ ಬಾದಶಹನು ಅವನನ್ನು ಬಹಳ ಪ್ರ
ಶಂಸೆ ಮಾಡಿದನು.
-(೪೨. ದೀಪದ ಬುಡದಲ್ಲಿ ಕತ್ತಲೆ.)-
ಒಂದು ಸಮಯದಲ್ಲಿ ಬಾದಶಹನೂ ಬೀರಬಲನೂ ಕೂಡಿಕೊಂಡು ಪಟ್ಟಣದ ಕಡೆಯ ಉಕ್ಕಡದಕೋಟೆಯ ಕೊತ್ತಳದಮೇಲೆ ಕುಳಿತುಕೊಂಡು ಆ ಸಮಂತಾದ್ಭಾಗದಲ್ಲಿದ್ದ ವನಶ್ರೀಯನ್ನು ಅವಲೋಕಿಸುತ್ತ ಕುಳಿತುಕೊಂಡಿದ್ದರು, ಆಗ ಬಾದಶಹನು ದೂರದಲ್ಲಿ ಅವಲೋಕಿಸುತ್ತಿರಲು ಕಳ್ಳರು ಸುಲಿದು ಕೊಳ್ಳುತ್ತಿರುವ ಒಬ್ಬ ಪಥಿಕನು ಕಂಡುಬಂದನು, ಅಪ್ಪರಲ್ಲಿ ಕಳ್ಳರಿಂದ ಬಿಡಲ್ಪಟ್ಟವನಾಗಿ ಆ ಪಧಿಕನು, ಬಾದಶಹನು ಕುಳಿತುಕೊಂಡಿದ್ದ ಕೊತ್ತ