ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩)
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೨೫೭


ರಫ್ತುಗಾರ- ಜೀಯಾ ? ಅಹುದು ಇದೇ ಚೀಲವು.
ಬಾದಶಹ- ನೀನು ಯಾವ ಸ್ಥಳದಲ್ಲಿ ರಫ್ತುಮಾಡಿರುವಿ ! ಎಂಬದನ್ನು ತೋರಿಸು.
ರಫ್ತುಗಾರ- ಇಲ್ಲಿಯೇ ಮಾಡಿದ್ದೇನೆ ನೋಡಬೇಕು.
ಬಾದಶಹ- (ಕಾಜಿಯನ್ನು ಕುರಿತು) ಯಾಕೆ ಇದರಮೇಲೆ ನಿನ್ನ ಅಭಿಪ್ರಾ ಯವೇನು!
ಆಗ ಕಾಜಿಯು ಹಿಂದೆಮುಂದೆ ತಿಳಿಯದೆ ನಿಂತುಕೊಂಡನು, ಅಧೋವದನನಾಗಿ ನೆಲವನ್ನು ನೋಡಹತ್ತಿದನು. ಆ ಕೂಡಲೇ ಇವನನ್ನು ಬಂಧನಮಾಡಿರಿ ಎಂದು ಸೇವಕರಿಗೆ ಆಜ್ಞಾಪಿಸಿದನು ಆಮೇಲೆ ಆ ಕಾಜಿಯ ಗೃಹಕ್ಕೆ ಹೋಗಿ ಶೋಧಮಾಡಿಸಲು ಚೀಲದಲ್ಲಿ ತುಂಬಿದ ಎಲ್ಲ ರೂಪಾಯಿಗಳು ದೊರೆತವು. ಆ ಸ್ತ್ರೀಯು ಪ್ರತಿಯೊಂದು ರೂಪಾಯಿಯ ಮೇಲೆ ತಾನು ಮಾಡಿದ ಚಿನ‍್ಹವನ್ನು ತೋರಿಸಿದಳು, ಬಾದಶಹನು ಕಾಜಿಯ ಸ್ವತ್ತನ್ನೆಲ್ಲ ಸರಕಾರಕ್ಕೆ ಸೇರಿಸಿಬಿಡಿರಿ ಎಂದು ಅಪ್ಪಣೆಮಾಡಿದನು, ಆ ಮೇಲೆ ಆ ಸ್ತ್ರೀಯಳಿಗೆ ಆ ರೂಪಾಯಿಗಳನ್ನೆಲ್ಲ ಕೊಟ್ಟು ಇನ್ನು ಮೇಲೆ ಹಣವನ್ನು ಪರರ ಸ್ವಾಧೀನಕ್ಕೆ ಕೊಡಬೇಕಾದರೆ ವಿಚಾರಮಾಡಿಕೊಂಡು ಕೊಡು! ಎಂದು ಬುದ್ಧಿಗಲಿಸಿ ಕಳುಹಿಕೊಟ್ಟನು.

-(೧೪೯, ದಿಲ್ಲಿಯಲ್ಲಿ ಕಾಕಪಕ್ಷಿಗಳು ಎಷ್ಟು ಅವೆ !)-

ಒಂದು ದಿವಸ ಬಾದಶಹನು ಎಲ್ಲರಿಗಿಂತಲೂ ಮುಂಚಿತವಾಗಿಯೇ ಓಲಗದಲ್ಲಿ ಬಂದು ಕುಳಿತುಕೊಂಡು ಬಂದ ಬಂದವರಿಗೆಲ್ಲ "ದಿಲ್ಲಿಯಲ್ಲಿ ಕಾಕ ಪಕ್ಷಿಗಳು ಗಳು ಎಷ್ಟು ಅವೆ! ” ಎಂದು ಪ್ರಶ್ನೆ ಮಾಡಹತ್ತಿದನು. ಕಾಗೆಗಳ ಸಂಖ್ಯೆಯ ನ್ನು ಎಣಿಸುವರಾರು ! ಈ ಪ್ರಶ್ನೆಗೆ ಯಾರೂ ಉತ್ತರವನ್ನು ಕೊಡದೆ ಸ್ವಸ್ಥವಾಗಿ ಕುಳಿತುಕೊಂಡು ಬಿಟ್ಟರು. ಬೀರಬಲನು ನಿಯಮಿತವಾದ ಸಮಯಕ್ಕೆ ಬಂದನು. ಆವನಿಗೂ ಬಾದಶಹನು ಇದೇ ಪ್ರಶ್ನೆಯನ್ನು ಮಾಡಿದನು ಕೂಡಲೇ ಬೀರಬಲನು ತತ್ಕಾಲಕ್ಕೆ- "ನರವರ ? ನಮ್ಮ ದಿಲ್ಲಿಯಲ್ಲಿ ಒಟ್ಟು ಹದಿನೈದುನೂರಾ ಐವತ್ತೈದು ಕಾಗೆಗಳು ಇರುವವು ” ಎಂದು ಉತ್ತರ ಕೊಟ್ಟನು. ಈ ಉತ್ತರದಿಂದ ಸಭಾಸದರಿಗೂ ಬಾದಶಹನಿಗೂ ಅತ್ಯಾಶ್ಚರ್ಯವಾಯಿತು. ಆಗ ಬಾದಶಹನು -"ಈ ಸಮಯದಲ್ಲಿ ನೀನು ಲೆಕ್ಕ ಮಾಡಿದವನಂತೆಯೇ ಹೇಳಿಬಿಟ್ಟೆ ? ಈ ಲೆಕ್ಕವನ್ನು ಮಾಡಲಿಕ್ಕೆ ನಿನಗೆ ಸಂಧಿಯು ಯಾವಾಗ ಸಿಕ್ಕಿತು, ನೀನು ಹೇಳಿದ ಸಂಖ್ಯೆಯು ಮಿಥ್ಯವಾಗಿ ಕಾಣುತ್ತದೆ?" ಎಂದನು. *