ತಿಳಿಯದೆ, ಸಿಟ್ಟಿಗೇಳುತ್ತಿದ್ದನು ಆದರೆ ಬೀರಬಲನು ಎಂದೂ ಕೃದ್ಧಾನಾ ಗುತ್ತಿದ್ದಿಲ್ಲ, ಒಂದು ದಿವಸ ಬೀರಬಲನಿಗೆ ಸಿಟ್ಟಗೆಬ್ಬಿಸಬೇಕೆಂದು ಬಾದಶಹನು ನಿಶ್ಚಯಿಸಿಕೊಂಡು ಮಾತು ಮಾತುಗಳನಾಡುತ್ತ " ಬೀರಬಲ್ಲ ರಾಂಧ ತಗಾಯಿ ” ಅಂದರೆ ( ಗೋವನ್ನು ಸೇವಿಸುವವನು ) ಎಂದನು ಬಾದಶಹನಾಡಿದ ಗೂಢವಾಕ್ಯದ ಎರಡೂಬಗೆಯ ಅರ್ಥಗಳು ಬೀರಬಲನ ಮನಸ್ಸಿನಲ್ಲಿ
ಹೊಳೆದವು ಅವನು ಕೃದ್ಧನಾಗದೆ, ಬಾದಶಹ ಶುಕರ ಕಾಯ ?” ಎಂದನು ಅದನ್ನು ಕೇಳಿದ ಕೂಡಲೆ ಬಾದಶಹನು ಅತಿ ಕ್ರುದ್ಧನಾಗಿ “ ಬೀರಬಲ! ನನಗೆ ಹಂದಿಯನ್ನು ತಿನ್ನಿಸುವಿಯಾ? ” ಎಂದು ಕೇಳಿದನು ಅದಕ್ಕೆ ಬೀರಬಲನು ಪ್ರತ್ಯುತ್ತರವಾಗಿ “ ಪೃಥ್ವಿಕ, ತಾವುಮಾತ್ರ ನನಗೆ ಗೋವನ್ನು ಸೇವಿಸುವವನು ಎಂದು ಅನ್ನ ಬಹುದೇ ?” ಎಂದು ಕೇಳಿದನು ಆಗ ಬಾದಶಹನು ತನ್ನ ಮಾತಿನ ಅರ್ಥವನ್ನು ಪಲ್ಲಟಮಾಡಿ, “ ನಾನು ಹಾಗೆ ಅಂದಿರುವದಿಲ್ಲ, ಗೋವನ್ನು ಆರಾಧಿಸುವ ಕಾಲದಲ್ಲಿ ಗಾಯನ ಮಾಡುತ್ತೀ ಎಂದು ಅಂದನು ಅದಕ್ಕೆ ನೀನೇಕೆ ಈವರಿ ಕೋಪವನ್ನು ತಾಳಿದಿ! ” ಎಂದು ಕೇಳಿದನು ಆ ಕೂಡಲೆ ಬೀರಬಲನು ಪೃಥ್ವಿನಾಥ ನಾನು ತಮಗೆ
ಹಂದಿಯನ್ನು ತಿನ್ನುವವನು ಎಂದು ಯಾವಾಗ ನುಡಿದನು, ನಾನು ಹೀಗೆ ಅಂದೆನಲ್ಲಾ ಬಾದಶಹನು ಶುಕರ ಕಾಯ. ಅಂದರೆ ಕುಕಗಳನ್ನು ರಕ್ಷಿಸಿದ್ದಾನೆ. ” ಎಂದು ನುಡಿದಿದ್ದೆನು ತಮಗೆ ನನ್ನ ಮಾತಿನ ಭಾವವು ಸಿಳಿಯದೆ, ವೃಥಾ ಕೊಡವನ್ನು ತಾಳಿದಿರಿ! ” ಎಂದು ಅಂದನು. ಈ ಪ್ರಕಾರ ಅವರಿಬ್ಬರು ತಮ್ಮ ತಮ್ಮ ಮನಸ್ಸಿನ ಸಮಾಧಾನ ಮಾಡಿಕೊಂಡರು.
– ೧೫೭, ಫಕೀರನು ನಿಷ್ಪೃಹತೆಯನ್ನು ತೋರಿಸಿದ್ದು.
ಒಬ್ಬ ಬ್ರಾಹ್ಮಣರು ತನ್ನ ಹೊಟ್ಟೆಗೆ ಸಹಾ ಪೂರ್ಣ ತಿನ್ನದೆ, ಒಂದು ಸಾವಿರ ರೂಪಾಯಿಗಳನ್ನು ಕೂಡ ಹಾಕಿದ್ದನು ಅವನ ಮನಸ್ಸಿನಲ್ಲಿ ಕಾಶೀ ವಿಶ್ವನಾಥನ ದರುಶನ ತೆಗೆದುಕೊಂಡು ಬರಬೇಕೆಂಬ ಸುಬುದ್ಧಿಯು ಹುಟ್ಟಿತು ಆಗ ತನ್ನ ಬಳಿಯಲ್ಲಿದ್ದ ರೂಪಾಯಿಗಳನ್ನು, ಯಾವನಾದರೊಬ್ಬ ವಿಶ್ವಾನಿಕನಾದ ಮನುಷ್ಯನ ಬಳಿಯಲ್ಲಿ ಇಟ್ಟು ಹೋಗಬೇಕೆಂದು ಯೋಚಿಸಿ ಶೋಧ ನಡೆಯಿಸಿದನು.
ಅದೇ ಊರಲ್ಲಿ ಒಬ್ಬ ಫಕೀರನು ಊರಹೊರಗೆ ಒಂದು ಗುಡಿಸಿಲವನ್ನು ಕಟ್ಟಿಕೊಂಡು ಸಾಯಂಕಾಲದ ತನಕ ಊರೊಳಗೆ ಬಂದು ಭಿಕ್ಷೆಯನ್ನೆತ್ತಿಕೊಂಡು ಪುನಃ ತನ್ನ ಪರ್ನಕುಟೀರಕ್ಕೆ ಬರುತ್ತಿದ್ದನು ಹೀಗಿರಲು ಒಂದಾನೊಂದು ದಿವಸ ಆ ಬ್ರಾಹ್ಮಣನಿಗೆ ಈ ಫಕೀರನ ಸಂದರ್ಶನವಾಯಿ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೬೨
ಅಕಬರಬೀರಬಲ ಚಾತುರವಾದ ವಿನೋದಕಥೆಗಳು.