ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬೪
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.

ನಿಗೆ ಕೊಡಿಸುತ್ತೇನೆ ” ಎಂದನು ಬಾದಶಹನು ಪ್ರಸನ್ನನಾದನು ಬೀರಬಲನು ತನ್ನ ನಂಬಿಗೆಯ ಒಬ್ಬ ಮನುಷ್ಯನನ್ನು ಕರೆದು ಅವನ ಕೈಯಲ್ಲಿ ಆಭರಣಗಳ ಒಂದು ಗಂಟನ್ನು ಕೊಟ್ಟು, ಅವನ ಕಿವಿಯಲ್ಲಿ ಏನೋ ಹೇಳಿದನು.ಅವನು ಆ ಗಂಟನ್ನು ತಕ್ಕೊಂಡು ಫಕೀರನ ಕಡೆಗೆ ಹೊರಟನು ಮುಂದೆ ಕಿಂಚಿತ್ಕಾಲದ ಮೇಲೆ ಆ ಬ್ರಾಹ್ಮಣನನ್ನು ಕರೆದು “ ನಾನು ಈಗ ಕಳುಹಿಸಿಕೊಟ್ಟಿರುವ ಮನುಷ್ಯನು ಆ ಫಕೀರನಿದ್ದ ಸ್ಥಳಕ್ಕೆ ತಲುಪಿರಬಹುದು. ನೀನು ಓಡುತ್ತ ಅಲ್ಲಿಗೆ ಹೋಗಿ ಆ ಮನುಷ್ಯನ ಸಮಕ್ಷಮಾ ನಿನ್ನ ಹಣವ ನ್ನು ಕೇಳು! ಅಂದರೆ ಆ ಕೂಡಲೆ ಕೊಟ್ಟು ಬಿಡುತ್ತಾನೆ; ಎಂದು ಹೇಳಿಕಳುಹಿಸಿದನು.
ಬೀರಬಲನ ವಿಜ್ಞಾಸಿಕನಾದ ಮನುಷ್ಯನು ಫಕೀರನ ಬಳಿಗೆ ಹೋಗಿ “ ನನ್ನ ಸರೋದರನು ಪ್ರವಾಸಕ್ಕೆ ಹೋಗಿದ್ದಾನೆ ಇನ್ನೂವರೆಗೂ ಬರಲಿಲ್ಲ ಅವನನ್ನು ಶೋಧಮಾಡಿ ಕರೆದುಕೊಂಡು ಬರಬೇಕೆಂದು ನನ್ನ ಮನಸ್ಸಿನಲ್ಲಿ ಕುತೂಹಲವು ಉತ್ಪನ್ನವಾಗಿದೆ ಅದರಿಂದ ಈ ಆಭರಣದ ಗಂಟನ್ನು ದಯಮಾಡಿ ತಮ್ಮ ಬಳಿಯಲ್ಲಿಟ್ಟುಕೊಂಡರೆ ಮಹದುಪಕಾರಮಾಡಿದಂತೆ ಆಗುತ್ತದೆ ” ಎಂದು ಹೇಳಿಕೊಳ್ಳ ಹತ್ತಿದ್ದನು. ಫಕೀರನು ನಿಸ್ಪೃಹತೆಯನ್ನು ಪ್ರಕಟೀಕರಿಸಬೇಕೆಂದು “ ನಾನು ಪರರ ಸ್ವತ್ತನ್ನು ಮುಟ್ಟುವದಿಲ್ಲ; ಆದ್ದರಿಂದ ನಿನ್ನ ದ್ರವ್ಯವನ್ನು ಬೇರೆನಂಬಿಗಸ್ತರಾದವರ ಬಳಿಯಲ್ಲಿ ಇಟ್ಟು ಹೋಗು ! ” ಎಂದು ಹೇಳಿದನು ಅದಕ್ಕೆ ಆ ಮನುಷ್ಯನು ಶಾಹಸಾಬರೇ ಪ್ರಪಂಚಿಕರಾದವರೆಲ್ಲರು ಹಣದಾಸೆಯುಳ್ಳವರೇ, ತಮ್ಮಂಥವರ ಸ್ಥಿತಿಯು ಹಾಗಲ್ಲ ನೀವು " ಪರದ್ರವ್ಯಾಣಿ ಲೋಷ್ಟವತ್ ” ಎಂದು ತಿಳಿಯತಕ್ಕವರು.ನನಗೆ ನಿಮ್ಮ ಹೊರತು ಬೇರೆಯವರ ವಿಶ್ವಾಸವಿಲ್ಲ, ಅದರಿಂದ ತಮ್ಮವಶದಲ್ಲಿಯೇ ಈ ಆಭರಣಗಳನ್ನು ಕೊಟ್ಟು ಹೋಗಬೇಕೆಂದು ಯೋಚಿಸಿದ್ದೇನೆ ” ಎಂದು ಹೇಳಿ ಆ ಗಂಟನ್ನು ಬಿಚ್ಚಿ ತೋರಿಸಿದನು. ಆಗ ಫಕೀರನ ಮನಸಿನಲ್ಲಿ ಆ ಶಾಂಕುರವು ಉತ್ಪನ್ನ ವಾಯಿತು, ಅಷ್ಟರಲ್ಲಿ ಮೊದಲಿನ ಬ್ರಾಹ್ಮಣನು ಬಂದು “ ಸಾಂ ಇಸಾಹೇಬ ! ನಾನು ಯಾತಾರ್ಥವಾಗಿ ಗಮನ ಮಾಡುವ ಕಾಲದಲ್ಲಿ ನಿಮ್ಮ ವಶಕ್ಕೆ ಕೊಟ್ಟು ಹೋದ ಧನವನ್ನು ಕೃಪಾಳುಗಳಾಗಿ ಕೊಟ್ಟು ಬಿಡಬೇಕು, ತಮ್ಮಂಥ ಸಾಧುಗಳುವರದ್ರವ್ಯಾ ಪಹಾರ ಮಾಡುವದು ಉಚಿತವಲ್ಲ ?” ಎಂದು ಹೇಳಲು ಫಕೀರನು ತನ್ನ ಮನದಲ್ಲಿಯೇ " ಈ ಬ್ರಾಹ್ಮಣನು ಹೆಚ್ಚು ಹೆಚ್ಚು ಮಾತಾಡಹತ್ತಿದರೆ ನನ್ನ ಅಪನಂಬಿಕೆಯ ಕೃತ್ಯವು ಬಯಲಿಗೆ ಬರುವದು ಹಾಗಾದರೆ ಕೈಗೆ ಬಂದ