ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೭೮
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


೨೭೮ " ಎಷ್ಟು ಅನ್ನವನ್ನು ಬೇಯಿಸುತ್ತಿದ್ದಾನಾದೀತು ? ನೋಡಿಯಾದರೂ ಬ ರೋಣ ” ಎಂದು ನದಿಯ ದಂಡೆಯ ಕಡೆಗೆ ಹೊರಟನು ಅಲ್ಲಿಹೋಗಿ ನೋ ಡಲು ಗಳದ ತುದಿಯಲ್ಲಿ ಗಡಿಗೆಯನ್ನು ಕಟ್ಟಿ ಹುಲ್ಲನ್ನು ಉರಿಹಚ್ಚುತ ಸ್ಟಾರಿಯು ಕುಳಿತುಕೊಂಡಿತ್ತು ಅದನ್ನು ನೋಡಿ,
ಬಾದಶಹ—" ಬಿರಬಲ್ಲ ! ಏನು ಅರಂಭಮಾಡಿರುವಿರಿ ? ”
ಬೀರಬಲ್ಲ — ಮಾನ್ಯವರ ! ಅನ್ನವನ್ನು ಬೇಯಿಸ ಹತ್ತಿದ್ದೇನೆ.
ಬಾದಶಹ— ಈ ದಿವಸ ನೀನು ಮೂರ್ಖನಾದಂತೆ ತೋರುತ್ತದೆ ಆಕಾಶ ದಲ್ಲಿ ಬಡಿಗೆಯನ್ನಿಟ್ಟು ಭೂಮಿಯಮೇಲೆ ಉರಿಹಚ್ಚಿದರೆ ಅನ್ನವು ಎಂ ವಾದರೂ ಪಕ್ವವಾಗುವದುಂಟೇ ?
ಬೀರಬಲ-ಪ್ರಭುವರೆ ! ಒಂದು ಹರದಾರಿ ದೂರದಲ್ಲಿದ್ದ ಬೇಗೆಯ ಜಳ ದಿಂದ ಬ್ರಾಹ್ಮಣನು ಜಲದಲ್ಲಿ ಸಂಪೂರ್ಣ ರಾತ್ರಿಯನ್ನು ಕಳೆದ ನೋ, ತನ್ನ ಈ ಅನ್ನವಾದರೂ ಪಕ್ವವಾಗ ಬಹುದು; ಇದರಲ್ಲಿ ನನ್ನ ಮೂರ್ಖತನವೇನು ?
ಬಾದಶಹ— ನಿನ್ನ ಅಭಿಪ್ರಾಯವು ಸರಿಯಾದದ್ದು ಈಗ ಅರಮನೆಗೆ ನಡೆ ಆ ಬ್ರಾಹ್ಮಣನನ್ನು ಕರೆಯಿಸಿ ಪಾರಿತೋಷಕವನ್ನು ಕೊಡುತ್ತೇನೆ. ಬಾದಶಹನ ಬೀರಬಲನೂ ಕೂಡಿಕೊಂಡು ಅರಮನೆಗೆ ಬಂದ ರು ಬಾದಶಹನು ಆ ಕೂಡಲೆ ಬ್ರಾಹ್ಮಣನನ್ನು ಕರೆಯಿಸಿಕೊಂಡು ಐವತ್ತು ಸಹಸ್ರ ರೂಪಾಯಿಗಳನ್ನು ಕೊಟ್ಟು ಕಳುಹಿದನು. ಬ್ರಾಹ್ಮಣನು ಪ್ರಸ ನ್ನನಾಗಿ ಬೀರಬಲನಿಗೂ ಬಾದಶಹನಿಗೂ ಆಶೀರ್ವಾದ ಮಾಡಿ ಹೊರಟು ಹೋದನು.
೧೬೩. ಚಾತುರ್ಯ ಗರ್ಭಿತವಾದ ಮೃತ್ತಿಕೆಯ ಘಟ.
ವಸಂತ ಕಾಲದಲ್ಲಿ ಬಾದಶಹನು ಓಲಗವನ್ನು ಉಪವನದಲ್ಲಿ ನೆರೆಯಿ ಸಬೇಕೆಂದು ಅಪ್ಪಣೆಮಾಡಿದನು ಅದರಂತೆ ಸಭೆಯು ನೆರೆಯಿತು ಬೀರಬ ಲನು ನ್ಯಾಯ ವಿಚಾರಣೆಯನ್ನು ಮಾಡುತ್ತ ಸಮೀಪದಲ್ಲಿಯೇ ಕುಳಿತು ಕೊಂಡಿದ್ದನು ಮುಂದೆ ನಾಲ್ಕಾರು ಗಳಿಗೆಯ ಮೇಲೆ ಆ ನ್ಯಾಯದ ನಿರ್ಣ ನನ್ನು ಹೇಳಿದನು ಆ ಮೇಲೆ ಒಬ್ಬ ವರ್ತಕನು ಬಂದು ಬಾದಶಹನ ಸಮ್ಮು ಖದಲ್ಲಿ ಒಂದು ಲೇಖವನ್ನು ತಂದು ಇಟ್ಟನು. ಆ ಕಾಗದವನ್ನು ತೆಗೆದು ನೋಡಲು ಅದರಲ್ಲಿ ಈ ಕೆಳಗಿನ ಅಭಿಪ್ರಾಯವಿತ್ತು. ಅಜಮೀರ ನಿವಾಸಿಯು, ದೇಶದೇಶಗಳಲ್ಲಿ ಸಂಚಾರಮಾ ಪದಾರ್ಥಗಳ ಕ್ರಯ ವಿಕ್ರಯಮಾಡಿ ಉಪಜೀವನ"