ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮೪
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ಈ ಗಾಮದಲ್ಲಿಯೇ ಬೀರಬಲನಿದ್ದಾನೆಂದು ನಿಶ್ಚಯಿಸಿ ಆ ಗ್ರಾಮದಧಿಕಾರಿ ಯನ್ನು ಕರೆಯಕಳುಹಿ ಕೇಳಿದನು, ಗ್ರಾಮಾಧಿಕಾರಿಯು ತಾನು ಮಾಡಿದ ಹಂಚಿಕೆಯನ್ನು ಹೇಳಿದನು. ಬಾದಶಹನು- “ ಈ ಹಂಚಿಕೆಯನ್ನು ಹೇಳಿ ಕೊಟ್ಟವರಾರು ? ” ಎಂದು ಕೇಳಿದನು, ಅವನು ತನ್ನ ಹೆಸರನ್ನೇ ಹೇಳಿದ ನು. ಆದರೆ ಅವನ ಮಾತು ಬಾದಶಹನಿಗೆ ನಂಬಿಗೆಯಾಗಲಿಲ್ಲ ಪಾರಿತೋಷಕ ದ ಆಶೆಯನ್ನು ಹಚ್ಚಿದನು ಆಗ ಗ್ರಾಮಾಧಿಕಾರಿಯು - "ಪೃಥ್ವಿನಾಥ ! ನನ್ನಿಂದ ಏನಾದರೂ ಅಪರಾಧವು ಘಟಸಿದ್ದರೆ ಕ್ಷಮಿಸಬೇಕು. ಕೆಲವು ಮಾ ಸಗಳಿಂದ ನಮ್ಮ ಗ್ರಾಮದಲ್ಲಿ ಒಬ್ಬ ಮನುಷ್ಯನು ಬಂದು ವಾಸವಾಗಿದ್ದಾನೆ ಅವನ ಬುದ್ಧಿಯ ಪರಿಣಾಮವಿದು” ಎಂದು ಹೇಳಿದನು. ಬಾದಶಹನಿಗೆ ಇಷ್ಟೇ ಬೇಕಾಗಿತ್ತು, ಗ್ರಾಮಾಧಿಕಾರಿಗೆ ಉಚಿತವನ್ನಿತ್ತು ಕಳುಹಿಸಿದನು. ಆ ಮೇಲೆ ಗಜ, ತುರಗ, ಪಲ್ಲ ಮೊದಲಾದ ಪರಿವಾರವನ್ನು ಕಳುಹಿ ಕರೆಯಿ ಸಿಕೊಂಡನು, ಬೀರಬಲನು ಆ ಕೂಡಲೆ ಬಂದುಭಿಟ್ಟನು, ಬಾದಶ ಹನ, ಅತ್ಯಾನಂದದಿಂದ ಅವನನ್ನು ತಬ್ಬಿಕೊಂಡು ಪೂರ್ವಪದದಲ್ಲಿ ನಿಯಮಿಸಿ, ಬಲ್ಕ , ಪಟ್ಟಣದ ಬಾದಶಹನ ಪತ್ರಾಭಿಪ್ರಾಯವನ್ನು ತಿಳಿಸಿದನು ಬೀರಬ ಲನು ಬಾದಶಹನಿಗೆ ಧೈರ್ಯಹೇಳಿ ಯಥಾಶಕ್ತಿ ಪ್ರಯತ್ನ ಮಾಡುತ್ತೇನೆಂದು ವಚನಕೊಟ್ಟನು, ಆಮೇಲೆ ತನ್ನ ಉಪವನದಲ್ಲಿ ಒಂದು ಕೂಷ್ಮಾಂಡಲತೆ ಯನ್ನು ಹಚ್ಚಿಸಿದನು ಅದಕ್ಕೆ ಕಾಯಿಯಾಗುವ ಕಾಲವು ಸಮೀಪಿಸಲು ಒಂದು ಹೀಚನ್ನು ಒಂದು ಮೃತ್ತಿಕಾ ಕುಂಭದಲ್ಲಿಡಿಸಿ ಜೋಪಾನಮಾಡಹ ತ್ತಿದನು, ಆ ಹೀಚು ಅಲ್ಲಿಯೇ ದೊಡ್ಡದಾಗಿ ಕೊಡದೊಳಗಿಂದ ಹೊರಗೆ ಬ ರದಹಾಗಾಯಿತು ಆಗ ಅದರತುಂಬನ್ನು ಕೊಯಿದು, ಆ ಕೊಡದ ಬಾಯಿಗೆ ಒಂದು ವಸ್ತ್ರವನ್ನು ಕಟ್ಟಿ ಬಾದಶಹನಮುಂದೆ ತರಿಸಿಯಿಟ್ಟು “ ಖಾವಂದ ಈ ಕೊಡದತುಂಬ ಬುದ್ಧಿಯು ಇರುವದು, ಇದನ್ನು ಬಲ್ಯದ ಬಾದಶಹನಿಗೆ ಕಳುಹಿಸಿಕೊಡುತ್ತೇನೆ ” ಎಂದನು. ಆಗ ಬಾದಶಹನು ಆ ಬುದ್ಧಿಯು ಹಾ ಗದೆ ? ನನಗೆ ಸ್ವಲ್ಪತೋರಿಸು ಎಂದು ಕೇಳಿದನು. ಅದಕ್ಕೆ ಬೀರಬಲನು ಇದರಲ್ಲಿ ಬುದ್ಧಿಯನ್ನು ತುಂಬಿ ಮೇಲೆ ವಸ್ತ್ರವನ್ನು ಕಟ್ಟಿದ್ದೇನೆ ಈಗ ಇದ ನ್ನು ಬಿಚ್ಚಿ ತೋರಿಸಿದರೆ ಕೆಟ್ಟು ಹೋಗುವದು ಹೀಗೆಯೇ ಇರಲಿ ಎಂದು ಹೇ ಳಿದನು, ಬಾದಶಹನು ಇವನ ವಚನಕ್ಕೆ ಮಾನ್ಯಮಾಡಿದನು. ಆಗ ಬಲ್ಲದ ಬಾದಶಹನ ಹೆಸರಿಗೆ " ಕೊಡವನ್ನು ತುಂಬಿ ಬುದ್ಧಿಯನ್ನು ಕಳಿಸಿಕೊಟ್ಟಿ ದ್ದೇನೆ ಅದು ನಿಮಗೆ ತಪ್ಪಿದಕೂಡಲೆ ಆ ಕೊಡದೊಳಗಿನ ಬುದ್ದಿಯು ಚೂ ರ್ಣವಾಗದಂತೆಯೂ, ಕೆಡವು ಒಡೆಯದಂತೆಯೂ ಎಚ್ಚರಿಕೆಯಿಂದ ಹೊ