ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೮೭


ವೂ ಸಿದ್ಧವಾಯಿತು ಬಾದಶಹನು ಸಭಾಸದರೊಡನೆ ಉಪವನಕ್ಕೆ ಬಂದನು ಬೀರಬಲನು ಮರಿಯಳ್ಳ ಕಪಿಯನ್ನು ಆ ಹೌದಿನಲ್ಲಿ ಕೂಡಿಸಿ ನೀರುತುಂ ಬುವಂತೆ ಪರಿಚಾರಕರಿಗೆ ಹೇಳಿದನು ಕ್ಷಣ ಕ್ಷಣಕ್ಕೆ ನೀರು ಹೌದಿನಲ್ಲಿ ಮೇ ಲಕ್ಕೇರಹತ್ತಿತು ಕಪಿಯು ತನ್ನ ಮರಿಯನ್ನು ಹೆಗಲಮೇಲೆ ಕುಳ್ಳಿರಿಸಿಕೊಂ ಡಿತು ನೀರು ಹೆಚ್ಚಾಗುತ್ತಾಗುತ್ತ ಕುತ್ತಿಗೆಯ ವರೆಗೆ ಬರಲು ಮರಿಯನ್ನು ತಲೆಯಮೇಲಿಟ್ಟುಕೊಂಡಿತು ಆಕೂಡಲೆ ಬಾದಶಹನು ಬೀರಬಲ್ಲ, ನೋ ಡು ! ಕಪಿಯು ತನ್ನ ಜೀವದಾಸೆಯನ್ನುಳಿದು, ಮರಿಯನ್ನು ಹ್ಯಾಗೆ ರಕ್ಷಿ ಸುತ್ತದೆ? ಕಂಡಿಯಾ ! ಇದರ ಮೇಲಿಂದ ಅವತ್ಯಪ್ರೇಮವು ಅಧಿಕವಾದ ದೆಂದು ಸಿದ್ಧವಾಗಲಿಲ್ಲವೇ? ಎಂದು ಕೇಳಿದನು ಅದಕ್ಕೆ ಬೀರಬಲನು ಭೂ ವರ ! ಸ್ವಲ್ಪ ಅವಕಾಶ ಮಾಡಿರಿ ತನ್ನ ಪ್ರಾಣಕ್ಕೆ ಬಂದಮೇಲೆ ನಿಜವಾದ ಪ್ರೇಮವು ಯಾವದೆಂದು ತಾನೇ ನಿರ್ಣಯವಾಗುವದು. ” ಎಂದು ಹೇಳುವ ದರೊಳಗಾಗಿ ಆ ಕಪಿಯ ಕಣ್ಣು ಮೂಗು, ಕಿವಿ, ಬಾಯಿಗಳಲ್ಲಿ ನೀರುಹೊ ಕ್ಕು ಪಾಣಹೋಗುವ ಸಮಯವು ಸಮೀಪಿಸಲು ಅದತ್ಯ ಪ್ರೇಮವನ್ನು ಬಿ ಟ್ಟು, ಆ ಮರಿಯನ್ನು ತೆಳಕ್ಕೆ ಹಾಕಿ, ಮೇಲೆ ತಾನು ನಿಂತುಕೊಂಡಿತು ಆ ಕೂಡಲೆ ಬಾದಶಹನಿಗೆ ಅದನ್ನು ತೋರಿಸಿ ನೀರನ್ನು ಹೊರಗೆ ತೆಗೆಯಲಿಕ್ಕೆ ಅಪ್ಪಣೆ ಮಾಡಿದನು, ವತ್ಸ ಸಹಿತವಾಗಿ ಕಪಿಯು ಬದುಕಿಕೊಂಡಿತು ಆಮೇ ಲೆ ಬೀರಬಲನು ಖಾವಂದ ! ಅವಲೋಕಿಸಿದಿರಾ ! ಅಪತ್ಯಪ್ರೇಮವು ಅಧಿ ಕವಾಯಿತೊ '.? ಸ್ವಂತಪ್ರಾಣವು ಅಧಿಕವಾಯಿತೋ? ಎಲ್ಲಿಯ ತನಕ ಪ್ರಾ ಣಸಂಕಟವು ಇರುವದಿಲ್ಲವೋ ಅಲ್ಲಿಯ ತನಕ ಅಪತ್ಯ ಪ್ರೇಮವಿರುವದು ಯಾವಾಗ ತನ್ನ ಪ್ರಾಣಕ್ಕೆ ಮುಳುವು ಬರುವದೋ ಆಗ ಎಲ್ಲ ಪ್ರೇಮಗ ಳು ಬಯಲಾಗಿ ಆತ್ಮ ಸಂರಕ್ಷಣೆಯೇ ಮುಂದೊರೆಯುವದು ? ಇದರ ಉ ದಾಹರಣೆಯನ್ನು ತಾವು ಪ್ರತ್ಯಕ್ಷ ಕಂಡದ್ದಾಯಿತು! ?” ಎಂದು ಹೇಳಲು, ಬಾದಶಹನೂ ಮುತ್ಸದ್ಧಿಗಳೂ ಬೀರಬಲನ ಚಾತುರ್ಯಕ್ಕೆ ಒಪ್ಪಿಕೊಂಡರು
-(೧೬೫, ಅತ್ಯದ್ಭುತ ಚಮತ್ಕಾರ.)-
ಬಾದಶಹ ಬೀರಬಲ್ಲರ ನಡುವೆಯಾವಾಗಲೂ ವಿನೋದವು ನಡೆದೇ ಇರುತ್ತಿತ್ತು ಒಂದು ದಿವಸ ಬಾದಶಹನು " ಬೀರಬಲ್ಲ ? ನಭೂತೋನಭ ವಿಷ್ಯತಿ ” ಇಂಥ ಒಂದು ಅತ್ಯದ್ಭುತ ಚಮತ್ಕಾರವನ್ನು ಮಾಡಿತೋರಿಸು ಎಂದನು ಬೀರಬಲನು ಸರಕಾರ ! ಇದು ಯಾವದೊಡ್ಡ ಸಂಗತಿಯು ! ತ ಮ್ಮ ಆಜ್ಞೆಯಾದ ಕೂಡಲೆ ತೋರಿಸುವೆನು ; ಎಂದನು ಹಾಗಾದರೆ ನಾಳೆ ಪ್ರಾತಃ ಕಾಲದಲ್ಲಿಯೇ ತೋರಿಸು ಎಂದು ಬಾದಶಹನು ಕೇಳಿದನು ಅದ