ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೩೮)
ಅಕಬರಬೀರಬಲ ಚಾತುರವಾದ ವಿನೋದಕಥೆಗಳು.
೨೯೭


-( ೧೬೬, ಅಕಬರ ಭಾರತ.)-

ಅಕಬರ ಬಾದಶಹನು ಗ್ರಂಥಗಳನ್ನು ರಚನೆಮಾಡುವದರಲ್ಲಿಯೂ ಮಾಡಿಸುವದರಲ್ಲಿಯೂ ವಿಶೇಷ ಅನುರಾಗವುಳ್ಳವನಾಗಿದ್ದನು. ಅವನು ಅನೇ ಕಪ್ರಕಾರದ ಪುರಾಣೇತಿಹಾಸಗಳನ್ನು ಓದಿದ್ದನು, ಮಹಾ ಭಾರತದಲ್ಲಿಯ ಕೌರವ ಪಾಂಡವರ ಯುದ್ಧದವರ್ಣನೆಯನ್ನು ಎಷ್ಟೋ ಸಾರೆ ಓದಿದ್ದನು, ಹೀಗಿರಲು ಒಂದುದಿವಸ ಪಾಂಡವರ ಕ್ರೌರ್ಯದ ಪ್ರಶಂಸೆಯ ಭಾಗವು ಬರಲು ಅವನ ಮನಸ್ಸಿನಲ್ಲಿ ತನ್ನ ಪರಾಕ್ರಮದ ವರ್ಣನೆಯುಳ್ಳ "ಅಕಬರಭಾರತ " ವೆಂಬ ಗ್ರಂಥವನ್ನು ರಚನೆಮಾಡಿಸಬೇಕೆಂಬ ಅಭಿಲಾಷೆಯು ಉತ್ಪನ್ನವಾಯಿತು ಅದನ್ನು ಬೀರಬಲನಮುಂದೆ ತಿಳಿಸಿದನು, ಮತ್ತು ಬೀರಬಲ್ಲ ಪುರಾತನಕಾಲದಲ್ಲಿ ಆಗಿಹೋದ ರಾಜರುಗಳ ಕೌರ್ಯೋದಾರ್ಯ ಗುಣಗಳಪ್ರಶಂಸಾ ಪರವಾದ ಎಷ್ಟೋ ಗ್ರಂಥಗಳಿರುವವು ರಾಮಚಂದ್ರನ ರಾಮಾಯಣವು ಕೃಷ್ಣನ ಮಹಿಮೆಯನ್ನು ವರ್ಣಿಸಿದ ಮಹಾಭಾಗವತ, ಪಾಂಡವರ ವರ್ಣನಾ ಪರವಾದ ಮಹಾಭಾರತವೂ ಇರುವಂತೆ ನನ್ನ ಕೀರ್ತಿಯ ವರ್ಣನೆಯುಳ್ಳ " ಅಕಬರಭಾರತ ” ವೆಂಬ ಗ್ರಂಥವನ್ನು ಮಾಡಿಸಬೇಕಾಗಿದೆ; ಈ ಭಾರತವರ್ಷದಲ್ಲಿ ಪಾಂಡವರು ರಾಜ್ಯಭಾರಮಾಡಿದಂತೆ ನಾನಾದರೂ ಅದೇ ಭಾರತವರ್ಷದ ಚಕ್ರವರ್ತಿಯಾಗಿದ್ದೇನೆ ನನ್ನ ಹೆಸರೂ ಈ ಭೂಮಂಡಲದಲ್ಲಿ ಪ್ರಖ್ಯಾತವಾಗಿದೆ” ಎಂದನು. ಆಗ ಬೀರಬಲನು ಮನಸ್ಸಿನಲ್ಲಿ ಇವನು ತನ್ನ ವರ್ಣನಾ ಪರವಾದ ಒಂದು ಗ್ರಂಥವನ್ನು ರಚನೆ ಮಾಡು ಎಂದು ಹೇಳಿದರೆ ಅದೊಂದು ವಿಧವಾಗಿ ಸಯುಕ್ತಿಕವಾದದ್ದೆ ಎಂದು ಎಣಿಸಬಹುದಾಗಿತ್ತು, ಹಾಗೆಹೇಳದೆ “ ಅಕಬರಭಾರತ ” ಎಂಬ ಹೆಸರಿನ ಗ್ರಂಥವನ್ನು ರಚನೆಮಾಡಿಸಬೇಕಾಗಿದೆ ಎಂದು ಹೇಳುತ್ತಾನೆ; ಈ ಅಪೇಕ್ಷೆಯನ್ನು ಅವನ ಮನಸಿನೊಳಗಿಂದ ದೂರಮಾಡಬೇಕು, ” ಎಂದು ನಿಶ್ಚಯಮಾಡಿಕೊಂಡು ಪೃಥ್ವಿನಾಥ ! ಅಕಬರ ಭಾರತವನ್ನು ರಚಿಸುವದರಲ್ಲಿ ಅಂಥ ಪ್ರಯಾಸವಿಲ್ಲ ಭಾರತದಲ್ಲಿ ಒಂದೂ ಕಾಲು ಲಕ್ಷ ಶ್ಲೋಕಗಳಿದ್ದಂತೆ ಅಕಬರಭಾರತದಲ್ಲಿಸಹ `ರಚಿಸಲಿಕ್ಕೆ ಅಂದೇಶವೇನೂ ಇಲ್ಲ, ಆದರೆ ಪ್ರತಿಯೊಂದು ಶ್ಲೋಕಕ್ಕೆ ಒಂದು ರೂಪಾಯದಂತೆ ಖರ್ಚುಬೇಕಾಗುತ್ತದೆ ಅದರಿಂದ ಅಷ್ಟು ರೂಪಾಯಿಗಳನ್ನು ನನ್ನ ವಶಕ್ಕೆ ಕೊಡಿಸಿದರೆ ನಾನು ಅದನ್ನು ರಚಿಸಲುದ್ಯುಕ್ತನಾಗುತ್ತೇನೆ ಅದು ಪೂರ್ತಿಯಾಗಬೇಕಾದರೆ ಷಣ್ಮಾಸಗಳು ಬೇಕಾಗಬಹುದು " ಎಂದು ಹೇಳಿದನು. ಈ ವಾಕ್ಯವನ್ನು ಕೇಳಿ ಬಾದಶಹನು ಬಹಳ ಪ್ರಸನ್ನನಾದನು ಆ ಕೂಡಲೆ ಕೋಶಾಧ್ಯಕ್ಷನನ್ನು ಕರೆಯಿಸಿ ಒಂದೂ ಕಾಲು ಲಕ್ಷ