ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಅತಿಶಯ ಕಷ್ಟವಾಗುವದು, ಅವನ ಕಷ್ಟವನ್ನು ನನಗೆ ನೋಡಲಿಕ್ಕೆ ಅ ಸದಳವಾಗಿ, ಅವನನ್ನು ಬೇರೆ ಕೆಲಸಕ್ಕೆ ನಿಯಮಿಸಬೇಕಂದರೆ, ಆಪದವ ನ್ನು ಸುಯಂತ್ರವಾಗಿ ಸಾಗಿಸಿಕೊಂಡು ಹೋಗುವಂಥ ಚತುರನು, ಮುಸ ಲ್ಮಾನರಲ್ಲಿ ದೊರೆಯುವದು ದುಸ್ತರವು, ಈ ಬಗ್ಗೆ ನಾನು ಎಷ್ಟು ಸಾರೆ ಪ್ರ ಯತ್ನ ಮಾಡಿಯೂ ನೋಡಿದ್ದೇನೆ ಅಮಾತ್ಯ ಪದವಿಯಲ್ಲಿ ಮುಸಲ್ಮಾನನ ನ್ನು ನಿಯಮಿಸಿಕೊಂಡರೆ, ಅವನಿಂದ ರಾಜ್ಯದಾಡಳಿತವು ಚನ್ನಾಗಿಸಾಗದೆ, ಪ್ರಜೆಗಳಿಗೆ ಅನೇಕ ದುಃಖಗಳು ಉಂಟಾಗುತ್ತವೆ, ಎಂಬದನ್ನೂ ಪರೀಕ್ಷಿ ಸಿನೋಡಿದ್ದೇನೆ ಇದರಿಂದ ಬೀರಬಲನನ್ನೇ ಮುಸಲ್ಮಾನ ಧರ್ಮಕ್ಕೆ ಸೇರಿ ಸಿಕ್ಕೊಂಡು ಬಿಟ್ಟರೆ, ನಾನು ಉಭಯಸಂಕಟಗಳಿಂದಲೂ ನಿವೃತ್ತನಾಗುವೆ ನು ಎಂದು ಯೋಚಿಸಿಕೊಂಡು, ಪ್ರತಿದಿನ ಓಲಗದಿಂದ ಎದ್ದು ಹೋಗು ವಾಗ, ಬೀರಬಲನಿಗೆ, ಭೋಜನಕ್ಕೆ ನಡೆ, ಎಂದು ಆಗ್ರಹ ಮಾಡಿ ಹೋ ಗುತ್ತಿತ್ತಿದ್ದನು. ಬೀರಬಲನು ತನ್ನ ಸಮಸೂಚಕತೆಯ ಬುದ್ಧಿಚಾತು ರ್ಯದಿಂದ ಯಾವದಾದರೊಂದು ಹಂಚಿಕೆಯಿಂದ ಆ ಪ್ರಸಂಗ ದೊಳಗಿಂದ ಪಾರಾಗಿ ಹೋಗುತ್ತಿದ್ದನು. ಹೀಗೆ ಎಷ್ಟೋ ದಿವಸಗಳು ಕಳೆದುಹೋದವು ಹೀಗಿರಲು ಒಂದಾನೊಂದುದಿವಸ ಬೀರಬಲನು ಆತ್ಯವಶ್ಯಕವಾಗಿದ್ದ ಕಾ ರ್ಯದಲ್ಲಿ ತೊಡಗಿರಲು, ಬಾದಶಹನು ಬೀರಬಲ್ಲ ! ನಾಳೆ ಪ್ರಾತಃಕಾಲದ ಲ್ಲಿ ಇಲ್ಲಿಯೇ ಭೋಜನಕ್ಕೆ ಬರಬೇಕು ” ಎಂದನು ಆಗ ಬೀರಬಲನು ಕಾ ರ್ಯಮಗ್ನನಾಗಿದ್ದದರಿಂದ, ಬಾದಶಹನ ಮಾತಿನ ಕಡೆಗೆ ಲಕ್ಷ್ಯವು ಹೋಗದೆ ಒಳ್ಳೇದು ” ” ಎಂದು ಉತ್ತರ ಕೊಟ್ಟುಬಿಟ್ಟನು, ಬೀರಬಲನು ಏಕವಚ ನಿಯಾಗಿರುವನೆಂಬ ನಂಬಿಗೆಯು, ಬಾದಶಹನಿಗೆ ಪೂರ್ಣವಾಗಿದ್ದದರಿಂದ ಆನಂದಿತನಾಗಿ ಯಾವತ್ತು ಪ್ರತಿಷ್ಠಿತ ಮುಸಲ್ಮಾನರಿಗೆ, ಈ ಸಮಾಚಾರ ವನ್ನು ತಿಳಿಸಿ, ನಾಳೆ ಪ್ರಾತಃಕಾಲದಲ್ಲಿ ಭೋಜನಕ್ಕೆ ಬರಬೇಕೆಂದು ಆಮಂ ತ್ರಣಕೊಟ್ಟು ಬಿಟ್ಟನು ಬೀರಬಲನಂಥ ಉಚುಕುಲದ ಹಿಂದುವು ಮುಸಲ್ಮಾ ನ ಧರ್ಮವನ್ನು ಸ್ವೀಕರಿಸುವನೆಂದು, ಎಲ್ಲರೂ ಅತ್ಯಾನಂದಿತರಾದರು ಇತ್ತ ಬೀರಬಲನು ತನ್ನ ಯಾವತ್ತು ಕಾರ್ಯಗಳಿಂದ ನಿವೃತ್ತನಾಗಿ ಕುಳಿತು ಕೊಂಡಮೇಲೆ, ಒಬ್ಬ ಹಿಂದೂಮನುಷ್ಯನು ಬಂದು - “ ನೀವು ಬಾದಶಹನ ಆಮಂತ್ರಣವನ್ನು ಸ್ವೀಕರಿಸಿದ್ದನ್ನು ಕಂಡು ನನಗೆ ಅತಿವಿಷಾದವಾಗಿದೆ ?? ಎಂದು ನುಡಿದನು. ಆ ನುಡಿಯು ಕಿವಿಗೆ ಬಿದ್ದಕೂಡಲೇ ಬೀರಬಲನು ದಿಂಗು ಬಡೆದು ಕುಳಿತುಕೊಂಡನು. ನಾಳೆಗೆ ಮುಸಲ್ಮಾನನಾಗುವ ಹೊತ್ತು ಬಂತು ಏನುಮಾಡಬೇಕು ನನ್ನ ಕೀರ್ತಿಯೆಲ್ಲ ಮಣ್ಣುಪಾಲಾಗುವ ಸಮಯವು ಬಂ