ಪ್ರಧಾಯಾನುಸಾರವಾಗಿ ನಡೆಯಿಸಲಿಕ್ಕೆ ನಮದೇನೂ ಆತಂಕವಿಲ್ಲ, ಮ
ತ್ತು ಯಾರೂ ಅಪ್ರಸನ್ನತೆಯನ್ನು ತೋರಿಸಲಾರರು ಎಂದು ಹೇಳಿ ಎಲ್ಲ
ರ ಮುಖವನ್ನು ನೋಡಿದನು ಅವರೆಲ್ಲರೂ ಸಮ್ಮತಿ ದರ್ಶಕವಾಗಿ ತಲೆಯ
ನ್ನು ಅಲುಗಾಡಿಸಿದರು ಈ ಪ್ರಕಾರ ಯಾವತ್ತರನ್ನೂ ವಚನಬದ್ಧರನ್ನಾ
ಗಿಮಾಡಿಕೊಂಡು ಒಂದು ಕೈಯಲ್ಲಿ ಜಲಪಾತ್ರೆಯನ್ನೂ ಮತ್ತೊಂದು ಕೈ
ಯಲ್ಲಿ ವರಾಹಕೇಶದ ಗುಚ್ಛವನ್ನೂ ಹಿಡಿದುಕೊಂಡು, ಆಗುಚ್ಛವನ್ನು ಜ
ಲದಲ್ಲಿ ಎದ್ದಿ ಎದ್ದಿ, ಪ್ರತಿಯೊಂದು ಭೋಜನಪಾತ್ರೆಯ ಮೇಲೆ ಚಿಮುಕಿಸ
ಹತ್ತಿದನು ಹೀಗೆ ಯಾವತ್ತು ಪಾತ್ರೆಗಳು ಶುದ್ಧವಾದ ಮೇಲೆ ಬಾದಶಹನ
ಪಾತ್ರೆಯ ಮೇಲೆ ಚಿಮುಕಿಸುವದಕ್ಕೆ ಬರಲು ಒಬ್ಬ ಅಮೀರನು-ಯಾ ಅ
ಲ್ಲಾ ! ಯಾ ಖುದಾ ! ಧರ್ಮಭ್ರಷ್ಮತೆಯುಂಟಾಯಿತು. ಬೀರಬಲನು ಕೈ
ಯಲ್ಲಿ ಹಿಡಿದದ್ದು, ಕೇಶದ ಗುಚ್ಛವು' ಎಂದು ಕೂಗಿದನು ಕೂಡಲೆ ಎಲ್ಲರೂ
ಎದ್ದು ನಿಂತುಕೊಂಡರು. ಬೀರಬಲನ ಮೇಲೆ ಗಾಲಿಪ್ರದಾನದ ವರ್ಷಣವು
ಆರಂಭವಾಯಿತು ಎಲ್ಲರೂ ಕೂಡಿ ಬೀರಬಲನನ್ನು ಭೋಜನಶಾಲೆಯಿಂದ
ದಬ್ಬಿಬಿಟ್ಟರು ಬಾದಶಹನು ವಚನಬದ್ದನಾದ್ದರಿಂದ ಏನನ್ನೂ ಮಾತಾಡದೆ
ಸ್ವಸ್ಥ ಕುಳಿತುಕೊಂಡು ಬಿಟ್ಟನು. ಧರ್ಮತ್ಯಾಗಕ್ಕಿಂತಲೂ ಪ್ರಾಣತ್ಯಾಗ
ವೇ, ಮೇಲಾದದ್ದೆಂಬ ಶಾಸ್ತ್ರಾಜ್ಞೆ ಯ ಪ್ರಕಾರವಾಗಿ ತನ್ನ ಧರ್ಮವನ್ನು ರ
ಕ್ಷಿಸಿಕೊಂಡದ್ದರಿಂದ ಬೀರಬಲನಿಗೆ ಅತ್ಯಾನಂದವಾಯಿತು ಬೀರಬಲನು ಕ್ಷಿ
ಪ್ರದಲ್ಲಿಯೇ ತಿರುಗಿ ಬಂದದ್ದನ್ನು ಕಂಡು ಹಿಂದೂಮತಾನು ಯಾಯಿಗಳಿ
ಗೆಲ್ಲ ಪರಮಾನಂದವಾಯಿತು ಅವನು ಮನೆಗೆ ಹೋಗಿ ಅನಂದದಿಂದ ಭೋಜ
ನತೀರಿಸಿಕೊಂಡನು ಬಾದಶಹನು ಆ ಮಂತ್ರಿತ ಜನರೆಲ್ಲ ಸಮಾಧಾನಮಾಡಿ
ಬೇರೆ ಪಾಕವನ್ನು ಮಾಡಿಸಿ ಭೋಜನ ಮಾಡಿಸಿದನು. ಆದಿನ ಮೊದಲ್ಗೊಂ
ಡು ಬಾದಶಹನು ಬೀರಬಲನನ್ನು ಎಂದೂ ಊಟಕ್ಕೆ ಅಮಂತ್ರಣವನ್ನು
ಕೊಡಲಿಲ್ಲ.
-( ೧೬೮, ನದಿಯು ಯಾಕೆ ರೋದಿಸುತ್ತಿರುವದು.) -
ಒಂದು ಸಾರೆ ವರ್ಷಾಕಾಲದಲ್ಲಿ ಸರ್ಜನ್ಯವು ಅತ್ಯಧಿಕವಾದ್ದರಿಂದ ಯಮುನಾಪ್ರವಾಹವು ಮೇರೆದಪ್ಪಿ ಪ್ರವಹಿಸ ತೊಡಗಿತು ರಾಜಪ್ರಸಾದವು ಆ ನದಿಯ ದಂಡೆಯಮೇಲೆಯೇ ಇದ್ದದರಿಂದ ಪ್ರವಾಹದ ರಭಸವು ಅತಿಶ ಯವಾಗಿ ಕೇಳ ಬರಹತ್ತಿತು ಆರ್ಧ ರಾತ್ರಿಯ ಸಮಯದಲ್ಲಿ ಆರಭಸದಿಂದ ಬಾದಶಹನಿಗೆ ನಿದ್ರೆಯು ತಿಳಿಯಿತು ಎದ್ದು ಕುಳಿತುಕೊಂಡನು ಯಮುನಾ ನದಿಯು ಈ ವರೆರೋದಿಸುತ್ತಿರುವ ಕಾರಣವೆ(ನಿದ್ದೀತು! ಎಂಬ ಪ್ರಶ್ನೆಯು