ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ.


ಷ್ಟವು ಲಭಿಸುವದೆಂತಲೂ ಎಷ್ಟೋ ಜನ ಶಾಸ್ತ್ರಜ್ಞರ ಮುಖದಿಂದ ಕೇಳಿದ್ದೇನೆ” ಎಂದು ಹೇಳಿದನು.

ಈ ಮಾತನ್ನು ಕೇಳಿದ ಕೂಡಲೆ ಸುಶರ್ಮನಿಗೆ ಪರಮಾನಂದವಾಯಿತು. ಕೂಡಲೆ ಅವರೀರ್ವರು ತಮ್ಮ ತಮ್ಮ ಸಾಮಾನುಗಳನ್ನು ಬೇರೆಬೇರೆಯಾಗಿ ಕಟ್ಟಿ ಒಂದು ಗುಡ್ಡದ ಓರೆಯಲ್ಲಿ ಹುಗಿದು, ಜಾನ್ಹವೀತಟಾಕಕ್ಕೆ ಬಂದರು. ಆಗ ಸುಶರ್ಮನು ವರಜನ್ಮದಲ್ಲಿ ಸಾರ್ವಭೌಮನಾಗಬೇಕೆಂಬ ಇಚ್ಛೆಯಿಂದಲು ಸುದಾನನು ಉತ್ತಮಕುಲದಲ್ಲಿ ಜನ್ಮವನ್ನು ಹೊಂದಿ ತನ್ನ ಮಿತ್ರನ ಪ್ರಧಾನಮಂತ್ರಿಯಾಗಬೇಕೆಂಬ ಇಚ್ಛೆಯಿಂತಲೂ, ದೇಹತ್ಯಾಗ ಮಾಡಿದರು. ಮತ್ತು ಪರಜನ್ಮದಲ್ಲಿ ಪೂರ್ವಜನ್ಮದ ವೃತ್ತಾಂತವು ಸ್ಮರಣೆ ಯಲ್ಲಿ ಇರಬೇಕೆಂಬ ಅಭಿಲಾಷೆಯು ಸಹಾ ಇತ್ತು.

ಮುಂದೆ ಅವರವರ ಇಚ್ಛಾನುಸಾರವಾಗಿ ಸುಶರ್ಮನ ಜನ್ಮವು ಹೂಮಾಯೂನ ಬಾದಶಹನಲ್ಲಿ ಆಯಿತು. ಸನ್ ೧೫೪೩-ನೇ ಇಸ್ವಿಯಲ್ಲಿ ಹೂಮಾಯೂನನ ಬೇಗಮ್ಮನ ಹೊಟ್ಟೆಯಲ್ಲಿ ಹುಟ್ಟಿದ ಅಕಬರಬಾದಶಹನ ಸುಶರ್ಮನ ಅವತಾರವು, ಸುಶರ್ಮನ ಇಚ್ಛೆಯಾದರೂ ಶ್ರೇಷ್ಟ ವರ್ಣದಲ್ಲಿಯೇ ಜನ್ಮತಾಳಬೇಕೆಂದು ಇತ್ತು, ಆದರೆ ತಪಸ್ಸನ್ನು ಆಚರಿಸುತ್ತಿರುವಕಾಲದಲ್ಲಿ ಕೇವಲ ಲಕ್ಷ್ಮೀರವನ್ನು ಪ್ರಾರ್ಥನೆ ಮಾಡಿ ಇರಹತ್ತಿದ್ದರಿಂದ ಮುಸಲ್ಮಾನಕುಲದಲ್ಲಿ ಜನ್ಮಧಾರಣ ಮಾಡಬೇಕಾಗಿ ಬಂತು. ಆದರೆ ಇವನು ಪೂರ್ವಜನ್ಮದಲ್ಲಿ ಹಿಂದುವಾಗಿಯೂ ತಪವನ್ನು ಮಾಡುತ್ತಿದ್ದರಿಂದ ಅವನಿಗೆ ಹಿಂದೂ ಧರ್ಮದಮೇಲೆ ವಿಶ್ವಾಸವುಂಟಾಗಿತ್ತು.

ಅದೇ ಪಟ್ಟಣದಲ್ಲಿಯೇ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಸುದಾನನ ಜನ್ಮವಾಯಿತು. ಬ್ರಾಹ್ಮಣನು ಆ ಕೂಸಿಗೆ ಸ್ವಪ್ನನಾಥ,ನೆಂದು ಹೆಸರಿಟ್ಟನು. ಆ ಬಾಲಕನು ಸುಂದರನಾಗಿದ್ದು ಚತುರನಾಗಿದ್ದನು. ಅವನು ಸ್ವಲ್ಪ ದಿವಸಗಳಲ್ಲಿಯೇ ಅನೇಕ ಶಾಸ್ತ್ರಗಳನ್ನೊದಿಕೊಂಡನು, ಇದರಿಂದ ಬಾದಶಹನು ಸಂತುಷ್ಟನಾಗಿ ಅವನಿಗೆ " ಬೀರಬಲ,", ಎಂದು ಕರೆಯಹತ್ತಿದನು. ಇವರಿಬ್ಬರ ಪೂರ್ವಜನ್ಮದ ಒಂದು ಆಖ್ಯಾಯಿಕೆಯು ಇದೇ ಗ್ರಂಥದಲ್ಲಿ ೧೨೦-ನೇದರಲ್ಲಿ ಬಂದದೆ.

ಜಾತಿ, ಜನ್ಮಭೂಮಿ, ಮತ್ತು ಪ್ರಾಕಟ್ಯ

ರಾಜಾ ಬೀರಬಲ್ಲನ ಜಾತಿಯು ನಿಃಸಂದೇಹವಾಗಿ ಗೊತ್ತಾಗಿರುವದಿಲ್ಲ; ಕೆಲವರು ಇವನು “ ಕಾನ್ಯ ಕುಬ್ಜ ", ಬ್ರಾಹ್ಮಣನೆಂದು ಹೇಳುತ್ತಾರೆ. ಕೆಲವರು " ಚೌಬೇ " ಕುಲದವನೆಂದು ಹೇಳುತ್ತಾರೆ. ಯಾಕಂದರೆ ಚೌಬೇ