ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೩೧೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಬಿಟ್ಟನು. ಆ ನಾವಲಿಗನು ಮನೆಗೆ ಹೋಗಿ ತನ್ನ ಆಪ್ತೇಷ್ಟರ ಮುಂದೆ ಯಾ ವತ್ತು ವೃತ್ತಾಂತವನ್ನು ಕಥನಮಾಡಿ ಪಲಾಯನಮಾಡಬೇಕೆಂಬ ತನ್ನ ಮ ನಸಿನ ಬಯಕೆಯನ್ನೂ ತಿಳಿಸಹತ್ತಿದನು. ಅಷ್ಟರಲ್ಲಿ ಆ ನಾವಲಿಗನ ಮ ಗನೊಬ್ಬನು ಹೊರಗಿನಿಂದ ಬಂದು, ಪಿತನೆ ! ನಮ್ಮ ಬಾಗಿಲಮುಂದೆ ಒಬ್ಬ ಕರ್ಮ ಚಾರಿಯು ಕುಳಿತುಕೊಂಡಿದ್ದಾನೆ ಎಂದು ಹೇಳಿದನು, ಈ ಮಾತು ಕಿ ವಿಗೆ ಬಿದ್ದ ಕೂಡಲೇ ಅವನ ಎದೆಯೊಡೆದು ನೀರಾಯಿತು. ಕೆಟ್ಟೆನು ಆ ಕರ್ಮ ಚಾರಿಯನ್ನು ಬೀರಬಲನೇ ಕಳುಹಿಸಿಕೊಟ್ಟಿದ್ದಾನೆ, ಇನ್ನು ಮಾತ್ರ ನನ್ನ ಜೀವವು ಉಳಿಯುವದಿಲ್ಲ ಎಂದು ಗಟ್ಟಿಯಾಗಿ ಕೂಗಿಬಿಟ್ಟನು. ಆಗ ಅವನ ಸ್ತ್ರೀಯು ಅಂಜಬೇಡಿರಿ, ಬೀರಬಲನುಹೋಗಿ ತಿರುಗಿಬರಲಿಲ್ಲವೇ, ಅದರಂ ತೇ ನೀವಾದರೂ ಬಂದೇಬರುತ್ತೀರಿ, ಧೈರ್ಯ ಹಿಡಿಯಿರಿ; ಎಂದು ಹೇಳಿದಳು, ಅದಕ್ಕೆ ನಾವಲಿಗನು ಆವನಮೇಲೆ ಜಗನ್ನಿಯಂತನ ಕೃಪಾ ಛತ್ರವದೆ ಅದ ರಿಂದಲೇ ಅವನು ಮರಳಿಬಂದನು, ನಾನು ನಿಶ್ಚಯವಾಗಿ ಮೃತ್ಯುವಿನಬಾ ಯಿಗೆ ತುತ್ತಾದೆನು, “ ಮಾಡಿದ್ದು ಉಣ್ಣೋ ಮಹಾರಾಯಾ,, ಎಂಬ ಸಾ ಮತಿಯಂತೆ ನನಗೆ ಆಮಾತು ನಿದರ್ಶನಕ್ಕೆ ಬಂತು. ನಾನುತೋಡಿದ ತಗ್ಗಿ ನಲ್ಲಿ ನಾನೇಬಿದ್ದೆನು ಉಪಾಯವಿಲ್ಲ ಎಂದು ಹಳಹಳಸಹತ್ತಿದನು, ಎಂಟು ದಿವಸಗಳ ಅವಧಿಯು ಪೂರ್ಣವಾಯಿತು ಬಾದಶಹನ ಕಡೆಯಿಂದ ಒಬ್ಬ ಕರ್ಮ ಚಾರಿಯು ಕರೆಯಲಿಕ್ಕೆ ಬಂದನು, ನಾವಲಿಗನು ತನ್ನ ಸಾಮಗ್ರಿಗಳನ್ನೆಲ್ಲಾ ತೆಗೆದುಕೊಂಡು ಬಾದಶಹನ ಎದುರಿಗೆ ಬಂದು ನಿಂತುಕೊಂಡನು ಬಾದಶ ಹ ನು ಆ ಕೂಡಲೆ ಬಿರಬಲನಿಗೆ ಅಪ್ಪಣೆಮಾಡಲು, ಅವನು ನಾವಲಿಗನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅವನನ್ನು ಕುಳ್ಳಿರಿಸಿ ಅವನಸುತ್ತಲೂ ಉರುವಲಗಳಿಂದ ಚಿತೆಯನ್ನು ರಚನೆಮಾಡಿಸಿ ಅಗ್ನಿಯನ್ನು ಹಚ್ಚಿಸಿಬಿಟ್ಟ ನು, ನೋಡನೋಡುವದರೊಳಗೆ ನಾವಲಿಗನ ದೇಹವು ಭಭೂತವಾಗಿ ಹೋಗಿಬಿಟ್ಟಿತು. ಈ ಪ್ರಕಾರ ಬೀರಬಲನು ತನ್ನ ಚಾತುರ್ಯದಿಂದಲೇ ತನ್ನ ಕತೃವ ನ್ನು ನಿರ್ನಾಮಮಾಡಿ ಸುಖದಿಂದ ಇರಹತ್ತಿದನು ಒಂದು ಕೈಯಿಂದ ಕರ್ಮ ಮಾಡಬೇಕು ಮತ್ತೊಂದು ಕೈಯಿಂದ ಅದರ ಫಲವನ್ನು ಭಕ್ಷಿಸಬೇಕು ಎಂ ಬ ನೀತಿ ವಚನದ ಕಡೆಗೆ ಎಳ್ಳಷ್ಟಾದರೂ ಲಕ್ಷ್ಯಕೊಡದೆ, ಎಷ್ಟೋಜನರು ತಾವೇ ಶ್ರೇಷ್ಟರೆಂದು ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ ಇದು ಸರಿಯಲ್ಲ ಸೇರಿ ಗೆ ಸವ್ವಾಸೇರು ಇದ್ದೆ ಇರುವದು.