ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೮
ಅಕಬರಬರಬಲ ಚಾತುರ್ಯವಾದ ವಿನೋದಕಥೆಗಳು


ಹತ್ತರಹೋಗಿ, ಅವನು ಹೇಳಿದಷ್ಟು ಬೆಲೆಯನ್ನು ಕೊಡುವದಕ್ಕೆ ಒಪ್ಪಿಕೊಂಡು, ಅವನನ್ನು ತನ್ನ ಮನೆಗೆ ಕರೆದುಕೊಂಡು ಬಂದನು ಆಮೇಲೆ ಅವನಿಗೆ ಮೂಲವನ್ನಿತ್ತು. ಎಲೈ ಕಾಷ್ವಾವಾಹಕನೇ! ನಿನ್ನ ಮುಖಚರ್ಯೆಯನ್ನು ನೋಡಿದರೆ ಪ್ರತಿಸಷ್ಠಿತ ಮಷ್ಯನಹಾಗೆ ಕಾಣಿಸುತ್ತಿ ಇರಲಿ ನಿನ್ನ ಕಡೆಯಿಂದ ನನ್ನದೊಂದು ಕಾರ್ಯವಾಗಬೇಕಾಗಿದೆ ನೀನು ಆ ಕಾರ್ಯವನ್ನು ನಿರ್ವಹಿನಿಕೊಟ್ಟರೆ ನಿನಗೆ ಐವತ್ತು ರೂಪಾಯಿಗಳನ್ನು ಕೊಡುವೆನು, ಎಂದನು ಆಗ ಕಾಷ್ಟವಿಕ್ರಯಿಯು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ, . ಇವನು ಈ ನಮ್ಮ ಪಟ್ಟಣದಲ್ಲಿ ಪ್ರತಿಷ್ಟಿತವಾದ ಅಮಾತ್ಯನಾಗಿದ್ದಾನೆ ಇವನು ಹೇಳಿದ ಮಾತನ್ನು ನಾನು ಕೇಳದಿದ್ದರೆ, ಕೋಪಗೊಂಡಾನು! ಇದು ಸರಿಯಲ್ಲ ಇದಲ್ಲದೆ ಐವತ್ತು ರೂಪಾಯಿಗಳನ್ನು ಕೊಡುತ್ತೇನೆಂದು ಹೇಳುತ್ತಾನೆ ಅಂದಮೇಲೆ ಇವನು ಹೇಳಿದ ಕಾರ್ಯವನ್ನು ನಿರ್ವಹಿಸಲಿಕ್ಕೆ ಆತಂಕವೇನು? ಎಂದು ನಿಶ್ಚಯಿಸಿಕೊಂಡು ಬೀರಬಲನನ್ನು ಕುರಿತು - ತಮ್ಮ ಅಪ್ಪಣೆಯ ಮೇರೆಗೆ ನಡೆದುಕೊಳ್ಳಲು ಸಿದ್ದನಿದ್ದೇನೆ, ಎಂದು ಹೇಳಿದನು ಆಗ ಬೀರಬಲನು - ಈಗ ನಾನು ಕೊಡುವ ಬಟ್ಟೆಗಳನ್ನು ಧಾರಣ ಮಾಡಿಕೊಂಡು ಹನುಮಂತ ದೇವರ ದೇವಾಲಯದಲ್ಲಿ ಹೋಗಿ ಕುಳಿ ತುಕೋ ಆಮೇಲೆ ಜಪಮಾಲೆಯನ್ನು ಹಸ್ತದಲ್ಲಿ ಧಾರಣ ಮಾಡಿಕೊಂಡು, ಧ್ಯಾನಸ್ಥನಂತೆ ಮೌನವಾಗಿ ಕುಳಿತುಕೊ ಯಾರು ಮಾತಾಡಿಸಿದ್ದರೂ ಮಾತಾಡಬೇಡ ಪ್ರತ್ಯಕ್ಷ ಬಾದಕಹನು ಬಂದು ಮಾತನಾಡಿಸಿದರೂ ಸಹ ಮಾತನಾಡಕೂಡದು ಅವನು ಏನಾದರೂ ಧನ ಕನಕಗಳನ್ನು ಕಾಣಿಕೆಯಾಗಿ ಸಮರ್ಪಿಸಿದರೂ ಕಣ್ಣೆತ್ತಿ ನೋಡಬಾರದು ನೀನು ಕೇವಲ ಧ್ಯಾನದಲ್ಲಿಯೇ ಮಗ್ನನಾಗಿರಬೇಕು ನಾನು ನಿನ್ನ ಕೃತ್ಯಗಳೆಲ್ಲವನ್ನೂ ನೋಡುತ್ತಿರುತ್ತೇನೆ ಅದರಲ್ಲಿ ಕಿಂಚಿತ್ ನ್ಯೂನಾಧಿಕ್ಯವು ಕಂಡು ಬಂದರೆ ನಿನ್ನ ತಲೆಯು ಉಳಿಯಲಾರದು ಎಂದು ಹೇಳಿ, ಅವನ ಸರ್ವಾಂಗಕ್ಕೆಲ್ಲ ವಿಭೂತಿಯನ್ನು ಬೊಳೆದು, ಕೌಪೀನವನ್ನು ಧಾರಣಮಾಡಿಸಿ, ಶಿರಸ್ಸಿನ ಮೇಲೆ ಕೃತ್ರಿಮ ಜಡೆಯನ್ನು ನಿರ್ಮಾಣಮಾಡಿ, ಒಂದು ಜಪಮಾಲೆಯನ್ನೂ, ಒಂದು ಮೃಗ ಚರ್ಮವನ್ನೂ ಕೊಟ್ಟು, ಶ್ರೀ ಮಾರುತಿಯ ದೇವಾಲಯದಲ್ಲಿ ಕುಳ್ಳಿರಿಸಿ, ಬಹ ಳ ಜಾಗ್ರತೆಯಿಂದ ವರ್ತನಮಾಡು! ಎಂದು ಸಾರಿ ಸಾರಿ ಹೇಳಿ ಬಾದಶಹನ ಬಳಿಗೆ ಬಂದನು. ಆಗ ಸಭೆಯಲ್ಲಿ ಸರದಾರರೂ, ಮಾನಕರಿಗಳೂ ಮಂಡಲೀಕರೂ, ಮೊದಲಾದವರು ಅನೇಕ ಜನರು ಕೂಡಿದ್ದರು ಬೀರಬಲನುಸ ಭಾಸ್ಥಾನವನ್ನು ಪ್ರವೇಶಿಸಿ - ಪೃಥ್ವಿನಾಥ! ನಮ್ಮ ಗುರುಗಳು ಈ ದಿನ