ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
322
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು



ನಗಳನ್ನು ಬಾದಶಹನು ಆಶ್ಚರ್ಯಾನ್ವಿತನಾದನು. ಆ ಸುಸಮಯದಲ್ಲಿ ಮಮತಾಜುದ್ದೀನ ನೆಂಬ ಪ್ರತಿಷ್ಟಿತ ಸರದಾರನು ಬದ್ದಾಂಜಲಿಯುಕ್ತನಾಗಿ ಎದ್ದು ನಿಂತು ಜಹಾಂವನಾಯ ? ಬೀರಬಲನಿಗಿಂತಲೂ ತಾನಸೇನನು ಅಧಿಕ ವಿದ್ವತೆಯುಳ್ಳವನೆಂದು ತಮಗೆ ಈಗ ತಿಳಿದುಬಂದೇ ಅದೆ, ಅದರಿಂದ ಬೀರಬಲನ ಕೆಲಸವನ್ನು ಇವನಿಗೆ ಕೊಡುವಿರೆಂದು ನಾವೆಲ್ಲರೂ ನಂಬಿದ್ದೇವೆ ಎಂದನು. ಈ ಮಾತನ್ನು ಎಲ್ಲರೂ ಪುಷ್ಟಿಕರಿಸಿದರು, ಆಗ ಬಾದಶಹನು ತಾನಸೇನನು ಬೀರಬಲನಿಗಿಂತಲೂ ಹೆಚ್ಚುಯೋಗ್ಯತೆಯವನಿರುವನೆಂದು ನನ್ನ ಮನವರಿಕೆಯಾಗಿದೆ ಆದರೆ ಬೀರಬಲನ ಚಾತುರ್ಯವು ಅವನಿಗೆಬರಲಾ ರದು ಇದು ನಿಮ್ಮ ಮನಸ್ಸಿಗೆ ಸರಿದೋರದಿದ್ದರೆ ಕಿಂಚಿತ್ ದಿವಸಗಳಲ್ಲಿ ನಿಮಗೆ "ಪ್ರತ್ಯಕ್ಷಮಾಡಿ ತೋರಿಸುತ್ತೇನೆ” ಎಂದು ಹೇಳಿದನು, ಮುಂದೆ ನಾಲ್ಕಾರು ಮಾಸಗಳ ಅವಧಿಯನ್ನು ಬಿಟ್ಟು, ಬ್ರಹ್ಮದೇಶದ ರಾಜನಿಗೆ " ಈ ಪತ್ರ ವನ್ನು ತೆಗೆದುಕೊಂಡು ಬಂದವರೀರ್ವರಿಗೂ ಕ್ಷಣಸಹ ವಿಲಂಬಮಾಡದೆ ದೇಹಾಂತ ಶೀಕ್ಷೆಯನ್ನು ವಿಧಿಸಬೇಕು. ” ಎಂಬ ಆಶಯಗರ್ಭಿತವಾದ ಒಂದು ಲೇಖನವನ್ನು ಬರೆದು ಒಂದುಚೀಲದಲ್ಲಿ ಹಾಕಿ, ಮೇಲೆ ಅರಗಿನಿಂದ ರಾಜ ಮುದ್ರೆಯನ್ನು ಒತ್ತಿ ಬೀರಬಲನನ್ನೂ ತಾನಸೇನನನ್ನೂ ಕರೆದು "ಬ್ರಹ್ಮ ದೇಶದ ರಾಜನಿಂದ ಒಂದು ಅತ್ಯವಶ್ಯಕವಾದ ಕಾರ್ಯವಾಗಬೇಕಾಗಿದೆ ನಿಮ್ಮಿಬ್ಬರ ಹೊರತು ಅನ್ಯರಿಂದ ಅದು ಸಾಧ್ಯವಾಗುವಂತೆ ಇಲ್ಲ, ನೀವು ಬೇಗನೇ ಹೊರಡುವ ಸಿದ್ಧತೆಯನ್ನು ಮಾಡಿರಿ, ನಾನು ಒಂದು ಪತ್ರವನ್ನು ಕೊಡು ತ್ತೇನೆ ವಿಲಂಬಮಾಡಬೇಡಿರಿ” ಎಂದು ಅಪ್ಪಣೆಮಾಡಿ ತಾನು ಬರೆದಿಟ್ಟ ಪತ್ರ ವನ್ನು ಅವರವಶಕ್ಕೆ ಕೊಟ್ಟನು. ಆಗ ಅವರಿಬ್ಬರು ಒಳ್ಳೇದು ಎಂದು ಹೇಳಿ ಮನೆಗೆಬಂದರು, ಮನೆಗೆ ಬಂದಮೇಲೆ ಬೀರಬಲನು ತನ್ನ ಮನಸ್ಸಿನಲ್ಲಿ ಬ್ರಹ್ಮ ದೇಶದ ರಾಜನಬಳಿಯಲ್ಲಿ ಅತ್ಯವಶ್ಯಕವಾದ ಕೆಲಸವೇನಿದ್ದೀತು ಇದರಲ್ಲಿ ಏನೋ ಒಂದು ಮಹತ್ವದ ಕಾರ್ಯಭಾಗವಿರಬೇಕು. ಇಲ್ಲದಿದ್ದರೆ ಏನೋ ಒಂದು ಕಪಟ ಪ್ರಬಂಧವಿರಬೇಕು, ಇರಲಿ ಸಮಯವು ಬಂದೊದಗಿದಾಗ ನೋ ಡಿಕೊಂಡರೆ ತೀರಿತು ಎಂದು ನಿಶ್ಚಯಿಸಿ; ಪಯಣದ ಸನ್ನಾಹದಲ್ಲಿ ತೊಡಗಿ ದನು. ತಾನಸೇನನು ತನ್ನ ಮನದಲ್ಲಿ ಏನೋ ಒಂದು ಮಹತ್ವದರಾಜಕರಣ ಉಂಟಾದ್ದರಿಂದಲೇ ಬಾದಶಹನು ನಮ್ಮನ್ನು ಈ ಕೆಲಸಕ್ಕೆ ಕಳುಹುತ್ತಾನೆ ಈ ಕಾರಣದಿಂದಲಾದರೂ ದೇಶಸಂಚಾರದ ಸುಖವು ದೊರಕಿದಂತಾಯಿತು ಮತ್ತು ನನ್ನ ಗಾನವಿದ್ಯೆಯ ಬಲದಿಂದ ಆ ರಾಜನನ್ನು ಒಲಿಸಿಕೊಂಡು ಪಾರಿತೋಷಕವನ್ನು ಪಡೆಯಬಹುದು ” ಎಂದು ಯೋಚಿಸಿ, ಮನೆಗೆ ಬಂದು