ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೩೨೪



ನ್ನು ಪರೀಕ್ಷಿಸುವದಕ್ಕೋಸುಗವೇ, ಈ ಹಂಚಿಕೆಯನ್ನು ತೆಗೆದಂತೆ ಕಾಣು ತ್ತದೆ ” ಎಂದು ನಿಶ್ಚಯಿಸಿಕೊಂಡು, ಪ್ರಾಣದಾಶೆಯನ್ನು ತೊರದಿದ್ದ ತಾನಸೇನನನ್ನು ಕುರಿತು "ಪ್ರಿಯಮಿತ್ರಾ! ನಾವಿಬ್ಬರೂ ಜೀವದಿಂದ ಉಳಿದು ಕೊಳ್ಳಬೇಕಾದರೆ ಒಂದು ಹಂಚಿಕೆಯದೆ ಅದು ಯಾವದೆಂದರೇ ಯಾವ ಸಮಯದಲ್ಲಿ ನಮ್ಮನ್ನು ವಧಸ್ಥಳಕ್ಕೆ ಕರೆದುಕೊಂಡು ಹೋಗುವರೋ ಆಗ ಪರಸ್ಪರರು ನಾಮುಂದೆ, ನಾಮುಂದೆ, ಎಂದು ಬಡದಾಡ ಹತ್ತಬೇಕು, ಇದರಿಂದ ಏನಾದರೂ ಜೀವ ಉಳಿಯುವದೇ ಹೊರತು, ಅನ್ಯ ಉಪಾಯವಿಲ್ಲ, ಎಂದು ಹೇಳಿದನು. ಅಂತೂ ಇಂತೂ ಏಳು ದಿವಸಗಳು ಕಳೆದು ಹೋದವು. ಎಂಟನೇ ದಿವಸ ಪ್ರಾತಃಕಾಲದಲ್ಲಿ, ಕರ್ಮಚಾರಿಗಳು ಬಂದು, ಇವರಿಬ್ಬರನ್ನೂ ವಧಸ್ಥಾನಕ್ಕೆ ಕರೆದುಕೊಂಡು ಹೋದರು. ತಾನಸೇನನು ಬಹಿರಂಗದಲ್ಲಿ ಪ್ರಸನ್ನತೆಯನ್ನು ವ್ಯಕ್ತಪಡಿಸುತ್ತಿದ್ದರೂ ಸಹ ಅಂತರಂಗದಲ್ಲಿ ಸ್ವಸ್ಥತೆಯಿದ್ದಿಲ್ಲ ವಧಸ್ಥಾನದಲ್ಲಿ ಒಯ್ದು ನಿಲ್ಲಿಸಿದ ಕೂಡಲೆ ಬೀರಬಲನು ಮುಂದೆ ಬಂದು " ಪ್ರಥಮದಲ್ಲಿ ನನ್ನ ತಲೆಯನ್ನು ಹೊಡಿಯಿರಿ ! ” ಎಂದು ಹೇಳಿದನು. ಆ ಕೂಡಲೆ ತಾನಸೇನನು ಬೀರಬಲನನ್ನು ಹಿಂದಕ್ಕದಬ್ಬಿ, ತಾನು ಮುಂದೆ ಬಂದು ಮೊದಲು ನನ್ನ ತಲೆಯನ್ನು ಹೊಡಿಯಿರಿ, ಎಂದು ವಿಜ್ಞಾಪ್ತಿಯನ್ನು ಮೂಡಿಕೊಂಡನು ಈ ಪ್ರಕಾರ ಒಬ್ಬರಿ ಗೊಬ್ಬರು ನಾಮುಂದೆ, ನಾ ಮುಂದೆ, ಎಂದು ಬಡಿದಾಡ ಹತ್ತಿದರು ಅದನ್ನು ಕಂಡು ಆ ಕರ್ಮ ಚಾರಿಗಳಿಗೆ ಬಹಳ ನಗೆಯು ಬಂತು ಅವರಲ್ಲೊಬ್ಬನು ಓಡುತ್ತ ಹೋಗಿ ರಾಜನ ಮುಂದೆ ಈ ಸಂಗತಿಯನ್ನು ಅರಿಕೆ ಮಾಡಿದನು ಆಗ ಆ ಅಮಾತ್ಯನು ಪೃಥ್ವಿನಾಥ ! ಇದರಲ್ಲಿ ಏನೋ ಒಂದು ಸಂದೇಹವಿದೆಯೆಂದು ಮೊದಲೇ ಹೇಳಿರಲಿಲ್ಲವೇ ? ಇಲ್ಲದಿದ್ದರೆ ಮೃತ್ಯು ಮುಖದಲ್ಲಿ ಬೀಳಲಿಕ್ಕೆ ಯಾವ ಅಜ್ಞನು ಸಂತೋಷದಿಂದ ಸಮ್ಮತಿಸುವನು ? ಅವರಿಬ್ಬರನ್ನೂ ಕರೆಯಿಸಿ ಕೇಳಬೇಕು ಎಂದು ಬಿನ್ನಹ ಮಾಡಿಕೊಂಡನು ಆ ಕೂಡಲೆ ಅವರನ್ನು ಇಲ್ಲಿಗೆ ಕರೆದುಕೊಂಡು ಬರ್ರಿ! ಎಂದು ಅಪ್ಪಣೆ ಮಾಡಿದನು ಅವರು ಬಂದ ಕೂಡಲೆ ಬ್ರಹ್ಮದೇಶದ ದೊರೆಯು ನಿವಿಬ್ಬರೂ ಮೃತ್ಯು ಮುಖದಲ್ಲಿ ಬೀಳಲಿಕ್ಕೆ ನಾ ಮುಂದೆ ನಾ ಮುಂದೆ ಎಂದು ಹಾತೊರೆಯುತ್ತಿರುವದೇಕೆ ? ಎಂದು ಕೇಳಿದನು ಅದಕ್ಕೆ ಬೀರಬಲನು ನೀವು ಕೇಳಿದ ಪ್ರಶ್ನೆಗೆ ನಾವು ಉತ್ತರವನ್ನು ಹೇಳಿದರೆ ನಮಗೇ ಅಧಿಕವಾದ ಹಾನಿಯು ತಟ್ಟುವ ಸಂಭವವುಂಟು ಅದರಿಂದ ನಾವು ಹೇಳುವದಿಲ್ಲ, ಎಂದನು ಬೀರಬಲನ ಈ ಉತ್ತರದಿಂದ ಅವರಲ್ಲಿದ್ದ ಸಂದೇಹವು ಮತ್ತಿಷ್ಟು ಬಲವತ್ತರವಾಯಿತು ಆಗ ಅಮಾತ್ಯನು ನೀವು ಇದ