ನ್ನು ವಧಮಾಡಿದರೆ ನಮಗೇ ಹಾನಿಯುಂಟಾಗುವದು ಆದ್ದರಿಂದ ಇವರು
ಹ್ಯಾಗೆ ಬಂದಿರುವರೋ ಹಾಗೆಯೇ ಬಿಟ್ಟು ಪತ್ರಕ್ಕೆ ಉತ್ತರವನ್ನು ಹೇಳಿ
ಕಳುಹಿಸಿದರಾಯಿತು” ಎಂದು ಹೇಳಿದನು. ಆ ರಾಜನಿಗೆ ಅಮಾತ್ಯನ ಮಾತು ಸರಿದೋರಿತು, ಆ ಮೇಲೆ ಬೀರಬಲನನ್ನು ಕುರಿತು... " ನಾನು ಅಕಬರ
ಬಾದಶಹನ ಮಾಂಡಲೀಕನೂ ಅಲ್ಲ, ಆಶ್ರೀತನೂ ಅಲ್ಲ, ಅದರಿಂದ ನಾನು
ಅಪ್ಪಣೆಯನ್ನು ಮಾನ್ಯಮಾಡಲಾರೆನು ನೀವು ನಿಮ್ಮ ಜನ್ಮ ಭೂಮಿಗೆ ಹೊರಟು ಹೋಗಿರಿ ನಿಮ್ಮ ಬಾದಶಹನಿಗೆ ಹೀಗೆ ಹೇಳಬೇಕಲ್ಲಾ “ ಬ್ರಹ್ಮದೇಶದ ಮಹಾರಾಜಾಧಿ ರಾಜನು ನಿಮ್ಮ ಸೇವಕನಲ್ಲವಾದ್ದರಿಂದ ನಿಮ್ಮ ಅಪ್ಪಣೆಯನ್ನು ಮಾನ್ಯಮಾಡದೆ ನಮ್ಮನ್ನು ಹಿಂದಕ್ಕೆ ಕಳುಹಿಕೊಟ್ಟನು ನಿರ್ದೊಷಿಗಳಾದ ನಮ್ಮನ್ನು ಕೊಂdu ಪಾಪಕ್ಕೆ ಗುರಿಯಾಗುವದಿಲ್ಲವೆಂದು "
ಹೇಳಿದನು ಎಂಬದಾಗಿ ತಿಳಿಸಿರಿ ! ಎಂದು ಅಪ್ಪಣೆ ಮಾಡಿದನು, ತಾನಸೇನನಿಗೆ ತನ್ನ ಜೀವಿತ ವಿಷಯದಲ್ಲಿ ನಿರಾಶೆಯುಳ್ಳವನಾಗಿದ್ದನು. ಬ್ರಹ್ಮದೇಶದ
ಅರಸನ ವಚನವು ಕರ್ಣೇoದ್ರಿಯವನ್ನು ಪ್ರವೇಶಿಸಿದ ಕೂಡಲೆ ಅತ್ಯಾನಂದವುಳ್ಳವನಾಗಿ ಬೇಗನೇ ಇಲ್ಲಿಂದ ಹೊರಟು ಹೋಗೋಣ ನಡೆ, ಎಂದು
ಬೀರಬಲನಿಗೆ ದುಂಬಾಲ ಬಿದ್ದನು. ಬೀರಬಲನು ಅವನನ್ನು ಸಮಾಧಾನ
ಮಾಡಿ ಬ್ರಹ್ಮ ದೇಶದ ಮಹಾರಾಜನನ್ನು ಕುರಿತು ಮಹಾರಾಜ : ಬಡವರಾದ ನಮ್ಮ ಮೇಲೆ ದಯತೋರಿಸಿರಿ ! ಮೊದಲು ನಮ್ಮ ವಧೆಗೆ ಅಪ್ಪಣೆಕೊಟ್ಟು ಈಗ ಹಿಂದೆಗೆಯುವದು ಯಾಕೆ ? ಈ ಮಾತು ತಮ್ಮಂಥವರಿಂದ ಆಗಬಾರದು . ನಮ್ಮ ಬಾದಶಹನ ಈ ಅಲ್ಪಕಾರ್ಯವನ್ನಾದರೂ ಮಾಡಿರಿ, ಈ
ಸಂಗತಿಯನ್ನು ಬಹಿರಂಗ ಪಡಿಸಿದರೆ ನಮಗೆ ಹಾನಿಯುಂಟಾಗುವದೆಂಬ ಸಂಗತಿಯನ್ನು ನಾನು ಪ್ರಥಮದಲ್ಲಿಯೇ ಅರಿಕೆ ಮಾಡಿಕೊಂಡಿದ್ದೆನಲ್ಲವೇ !
ಅದರಂತೆಯೇ ಆಯಿತು ಆಗಲಿ ಉಪಾಯವಿಲ್ಲ ಈಗಾದರೂ ಕೃಪಾಳುಗಳಾಗಿ ವಧೆಗೆ ಅಪ್ಪಣೆಕೊಡಿರಿ ! ಎಂದು ಬಿನ್ನಹ ಮಾಡಿಕೊಂಡನು ಬೀರಬಲನ ಮಾತುಗಳನ್ನು ಕೇಳಿ, ನೀನು ಎಷ್ಟು ಪ್ರಾರ್ಥಿಸಿದರೂ ಪ್ರಯೋಜನವಾಗಲರಿಯದು ತಿಳಿದೂತಿಳಿದು ಯಾವನಾದರೂ ವಿಷಾಪ್ರಾಷಾನಮಾಡುವನೇ
ಅಕಬರಬಾದಶಹನ ಯೋಗ್ಯತೆಯು ನಮ್ಮಲ್ಲಿದ್ದ ಕನಿಷ್ಟ ಪರಿಚಾರಕನ ಯೋಗ್ಯತೆಯಕಿಂತಲೂ ಹೀನವಾಗಿದೆ ಈಗ ನೀವು ಇಲ್ಲಿಂದ ಸುಮ್ಮನೆ ಹೊರಟು
ಹೋಗಿರಿ ಇಲ್ಲವಾದರೆ ಪರಿಚಾರಕರ ಕಡೆಯಿಂದ ದಬ್ಬಿಸಿಕೊಳ್ಳುವ ಪ್ರಸಂಗವು ಬಂದೀತು ? ತಿಳಿಯಿತೇ ? ಎಂದು ಕೇಳಿದನು. ಆಮಾತಿಗೆ ಬೀರಬಲನು
ಹೀಗೆ ತಮ್ಮ ಅಪ್ಪಣೆಯಾದರೆ ಉಪಾಯವಿಲ್ಲ ದಿಲ್ಲಿಗೆ, ಪ್ರಯಾಣ ಮಾಡು
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೮
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೨೭