ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೪೨)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೨೪

ದುವದು ಹ್ಯಾಗೆ ? ಎಂಬದನ್ನು ವಿಶದ ಪಡಿಸಿ ತೋರಿಸಬೇಕು ಅಂದರೆ ಅವರೂ ನಾವೂ ಸಮಾನರೆಂದು ತಿಳಿದುಕೊಳ್ಳುವೆವು ಎಂದನು ಈ ಮಾತಿಗೆ ಬಾ ದಶಹನು- " ಅವರವರ ಧರ್ಮವು ಅವರವರಿಗೆ ಶ್ರೇಷ್ಠವಾದದ್ದೇ ಯಾವ ದರ್ಮವನ್ನೂ ನಿಂದಿಸ ಕೂಡದು ತಮ್ಮ ತಮ್ಮ ಧರ್ಮಗಳಲ್ಲಿ ದೃಢವಿಶ್ವಾಸವ ನ್ನಿಡಬೇಕು ಧರ್ಮದ ವಿಷಯವನ್ನು ಮುಂದೆ ಮಾಡಿ ಇತರರಿಗೆ ಹಾನಿಯ ನ್ನುಂಟು ಮಾಡುವದು ಉಚಿತವಾದದ್ದಲ್ಲ ನನ್ನ ಪ್ರಜೆಗಳಾದ ಹಿಂದೂ ಜನರಿಗೆ ಯಾವನಿಂದಾದರೂ ಉಪಟಳವು ಉಂಟಾದರೆ, ಅವನು ಸರದಾರನಾಗಿರಲಿ, ಅಥವಾ ಕನಿಷ್ಟ ಪ್ರತಿಯ ಸೇವಕನಾಗಿರಲಿ ಅವನಿಗೆ ಕಠಿಣತರವಾದ ಶೀಕ್ಷೆಯನ್ನು ವಿಧಿಸುವೆನು ಈ ಸಂಗತಿಯನ್ನು ಯಾವತ್ತರೂ ಸ್ಮರಣೆಯಲ್ಲಿಟ್ಟು ಕೊಳ್ಳಿರಿ ! ಎಂದು ಆಜ್ಞೆಮಾಡಿದನು ಅದರಿಂದ ಯಾವತ್ತರೂ ಶಾಂತತಯಿಂದ ವರ್ತಿಸಹತ್ತಿದರು.
-( ೧೭೪, ಚಿಕ್ಕ ಮಗುವು ಅಳುತ್ತಿತ್ತು.) -
ಒಂದು ದಿವಸ ಬಾದಶಹನ ಸಭಾಸ್ಥಾನದಲ್ಲಿ ಬೀರಬಲನ ಹೊರತು ಆನ್ಯಸರದಾರರೂ ಮಾನಕರಿಗಳೂ ಕೊಡಿದ್ದರು, ಬಾದಶಹನು ಬೀರಬಲನ ಮಾರ್ಗವನ್ನು ಬಹಳಹೊತ್ತು ನೋಡಿದನು. ಆದರೂ ಬೀರಬಲನು ಬರಲಿಲ್ಲ ಅದನ್ನು ಕಂಡು ಒಬ್ಬ ಪರಿಚಾರಕನನ್ನು ಕೊಟ್ಟು ಕಳುಹಿದನು. ಆ ಪರಿಚಾರಕನು ಬೀರಬಲನ ಮನೆಗೆ ಹೋಗಿ, ಬಾದಶಹನ ಆಜ್ಞೆಯನ್ನು ಶ್ರುತ ಪಡಿಸಿದನು ಆಗ ಬೀರಬಲನು " ಹೂ ! ಬರುತ್ತೇನೆ ” ಎಂದು ಹೇಳಿಕಳುಹಿ ಸಿದನು ಪರಿಚಾರಕನು ಬಂದು ಹಾಗೆಯೇ ಹೇಳಿದನು ಮುಂದೆ ಆರ್ಧ ತಾಸಾದರೂ ಬರಲಿಲ್ಲ ಪುನಃ ಮತ್ತೊಬ್ಬ ಪರಿಚಾರಕನನ್ನು ಅಟ್ಟಿದನು. ಅವನಿಗೂ ಆದೇ ಉತ್ತರವನ್ನು ಹೇಳುವ ಪ್ರಸಂಗವು ಬಂತು ಅದನ್ನು ಕೇಳಿ ಬಾದಶಹನಿಗೆ ಆತಿಶಯ ಕೋಪವು ಬಂತು ಮೂರನೆಯವನನ್ನು ಕಳುಹಿಸಿದರೂ ಕೂಡಬರಲಿಲ್ಲ ಆಗ ಬಾದಶಹನು "ಬೀರಬಲನನ್ನು ಕಟ್ಟಿ ಹಿಡಿದಕೊಂಡು ” ಬರುವಂತೆ ಆಜ್ಞಾಪಿಸಿದನು. ಆ ಸೇವಕನು ಬೀರಬಲನ ಸನ್ನಿಧಿಗೆ ಬಂದು ರಾಜಾಜ್ಞೆಯನ್ನು ತಿಳಿಸಿದನು ಆಗ ಬೀರಬಲನು ಇನ್ನು ವಿಲಂಬ ಮಾಡಿ ಪ್ರಯೋಜನವಿಲ್ಲವೆಂದು ತಿಳಿದು ಬಟ್ಟೆಗಳನ್ನು ಧಾರಣಮಾಡಿಕೊಂಡು ಸೇವಕನ ಬೆನ್ನು ಹತ್ತಿ ಸಭಾಸ್ಥಾನವನ್ನು ಪ್ರವೇಶಿಸಿ, ನಿತ್ಯ ನಿಯಮಾ ನುಸಾರವಾಗಿ ಬಾದಶಹನಿಗೆ ನಮಸ್ಕಾರಮಾಡಿ ತನ್ನ ಸ್ಥಳದಲ್ಲಿ ಕುಳಿತು ಕೊಂಡನು. ಆಗ ಬಾದಶಹನು ಬೀರಬಲ್ಲ ! ಈ ದಿವಸ ನಿನ್ನನ್ನು ಕರೆಯ ಕಳುಹಿ ಕಳುಹಿ, ಬೇಸತ್ತು ಹೋದೆನು ಆದರೆ ನಿನ್ನ “ ಹೂ ಬರುತ್ತೇನೆ ”