ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೦
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ಬಹಳಜೋಕೆ ! ಒಂದುವೇಳೆ ಈ ವರ್ತಮಾನವು ಬಯಲಿಗೆ ಬಂ ನಿನ್ನನ್ನು ಕಡಿದು ತುಂಡುಮಾಡಿ ಬಿಟ್ಟೇನು ! ” ಎಂದು ಆಜ್ಞೆಮಾಡಿ ಹೊರಬಿದ್ದು ಹೋದನು. ಆ ಸ್ತ್ರೀಯು ರೋದನ ಮಾಡಲಾರಂಭಿಸಿದಳು, ಅವಳಧ್ವನಿಯು ಕೊತವಾಲನಿಗೆ ಕೇಳಬರಲು ಅವನು ನಾಲ್ಕೆಂಟುಜನ ಸಿಪಾ ಯಿಗಳನ್ನು ಕರೆದುಕೊಂಡು ಓಡುತ್ತಸಾವುಕಾರನ ಮನೆಗೆ ಬಂದನು ಮತ್ತು ರೋದನಕ್ಕೆ ನಿಮಿತ್ಯವೇನೆಂದು ಕೇಳಿದನು. ಆಗ ಆ ಸಾವುಕಾರನ ಮಡದಿ ಯು- " ನನ್ನ ಪತಿಯು ಈ ಪಟ್ಟಣದ ರಾಜತನಯನ ಶಿರವನ್ನು ಕೊಯ್ದು ಕೊಂಡು ಬಂದು ಈ ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿಕೊಂಡು ಹೊರ ಗೆಹೋಗಿದ್ದಾನೆ ಈ ಸಂಗತಿಯನ್ನು ಗುಪ್ತವಾಗಿ ಇಡು ! ಎಂದು ನನಗೆ ಅಪ್ಪಣೆಮಾಡಿ ಬಲವಾಗಿ ಪ್ರಹಾರಮಾಡಿ ಹೋಗಿದ್ದಾನೆ, ಆ ಪೆಟ್ಟಿನ ನೋ ವಿನಿಂದ ನಾನು ರೋದಿಸಹತ್ತಿದ್ದೇನೆ” ಎಂದು ಹೇಳಿದಳು. ಅವಳಬೆನ್ನ ಮೇ ಲಿನ ಬಾಸಳಿಕೆಗಳನ್ನು ನೋಡಿದಕೂಡಲೇ ಸಾವುಕಾರನನ್ನು ಹಿಡಿದುಕೊಂ ಡುಬರಿ ! ಎಂದು ತನ್ನ ಸಿಪಾಯಿಗಳಿಗೆ ಹೇಳಿದನು. ಅವರು ಕೂಡಲೆ ಧಾ ವಿಸಿ ಹೋಗಿ ಮಾರ್ಗದಲ್ಲಿ ಹೋಗುತ್ತಿದ್ದ ಬೀರಬಲನನ್ನು ಹಿಡಿದು, ಚತು ರ್ಭುಜಮಾಡಿ ನಿಂದಿಸುತ್ತ ಹೊಡೆಯುತ್ತ ದಬ್ಬುತ್ತ ಕೊತವಾಲನೆಡೆಗೆ ಎಳೆ ತಂದರು. ಆಗ ಆ ಸಾವುಕಾರನು ಕೊತವಾಲಸಾಹೇಬ ನೀವು ನನ್ನ ಪರಮ ಮಿತ್ರರಾಗಿದ್ದು ನನ್ನನ್ನು ಹೊಡೆದುಬಡೆದು ಯಾಕೆ ಪೀಡಿಸುತ್ತೀರಿ. ಕೊತವಾಲ ಈ ಸಮಯದಲ್ಲಿ ನೀನು ನನ್ನ ಮಿತ್ರನಲ್ಲ, ನಿನ್ನಿಂದ ಮಹತ್ತರವಾದ ಒಂದು ಅಪರಾಧವು ಸಂಘಟಿಸಿದೆ ” ಎಂದು ಹೇಳಿ, ಅವನ ನ್ನು ರಾಜಸಭೆಗೆ ತೆಗೆದುಕೊಂಡು ಹೋಗಿ. ಈ ಪೃಥ್ವಿನಾಥ! ಇವನು ಒಂ ದು ಮಹತ್ತಾದ ಅಪರಾಧವನ್ನು ಮಾಡಿದ್ದಾನೆ. ಏನಂದರೆ- ಈ ಯುವರಾಜನ ತಿರವನ್ನು ಕಡಿದುಕೊಂಡು ಹೋಗಿ ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿ, ಈ ಸು ದ್ಧಿಯು ಅನ್ಯರಿಗೆ ವಿದಿತವಾಗದಂತೆ ಜಾಗ್ರತೆಯಿಂದ ಇರು ! ಎಂದು ಅಪ್ಪ ಣೆಮಾಡಿ ನಿರಪರಾಧಿಯಾದ ತನ್ನ ಸ್ತ್ರೀಯನ್ನು ಚನ್ನಾಗಿ ಪ್ರಹರಿಸಿ ಹೊ ರಟು ಹೋಗಿದ್ದಾನೆ ಅವಳು ರೋದಿಸುವ ಸ್ವರವು ಸಮೀಪದಲ್ಲಿದ್ದ ನನ್ನ ಕಿ ವಿಗೆ ಕೇಳಿಸಲು, ನಾನು ಹೋಗಿ ಸಮಾಚಾರವೆಲ್ಲವನ್ನು ತಿಳಿದುಕೊಂಡು ಇವನನ್ನು ಹಿಡತರಿಸಿ, ಸನ್ನಿಧಿಯಲ್ಲಿ ಒಪ್ಪಿಸಿದ್ದೇನೆ ” ಎಂದು ಅರಿಕೆಮಾಡಿ ಕೊಂಡನು. ಆಗ ರಾಜನು ಯಾವದನ್ನೂ ವಿಚಾರಿಸದೆ; " ವಧಸ್ಥಾನಕ್ಕೆ ಕರೆದುಕೊಂಡು ಹೋಗಿ ತಲೆಹೊಡೆದು ಬಿಡರಿ, ” ಎಂದು ಆಜ್ಞಾಪಿಸಿದನು. ಕೊತವಾಲನು ಸಾವುಕಾರನನ್ನು ಕರೆದುಕೊಂಡು ವಧಸ್ಥಾನಕ್ಕೆ ನಡೆದನು "