ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨) ಪೂರ್ವಜನ್ಮದ ವೃತ್ತಾಂತ. ಸೈನ್ಯದೊಡನೆ ಹೋರಾಡುತ್ತಾ ಕಾಂಗಡೆ' ಎಂಬmಾಮಕ್ಕೆ ತಲುಪಿದರು ಆಗ ಜಯಚಂದನ ಮಗನಾದ ವಿಧಿಚಂದ್ರನು ಕೋಟೆಯ ಹೊರಮಗ್ಗಲಿಗೆ ಬಂದು ಕಾಳಗಮಾಡಹತ್ತಿದನು, ಸ್ವಲ್ಪ ಹೊತ್ತಿನವರೆಗೆ ಉಭಯಪಕ್ಷದಲ್ಲಿ ನಿಕರದ ಕಾಳಗವೆಸಗಿತು, ಕೋಟೆಯು ಕೈವಶವಾಕುವ ಸಮಯವು ಬಂದು ಒದಗಿತು ಅಪ್ಪರಲ್ಲಿ ಮಿರಜಾ ಇಬ್ರಾಹಿಮಾನನು ಲಾಹೋರದ ಮೇಲೆ ದಂಡೆತ್ತಿ ಬರಹತ್ತಿದ್ದಾನೆಂಬ ವಾರ್ತೆಯು ಸೈನ್ಯದೊಳಗೆ ಪಸರಿಸಿತು. ಆಗ ಹುಸೇನ ಕುಲೀಖಾನನು ಬೀರಬಲ್ಲನಿಗೆ ಕೇಳುತ್ತಾನೆ;- II ಈಗ ಏನುಮಾ ಡಬೇಕು ಎಂದನು. ಆಗ ಬೀರಬಲ್ಲನು ಉತ್ತರಕೊಟ್ಟಿದ್ದೇನಂದರೆ (ಚಾದ ಕಹನ ಅಪ್ಪಣೆಯನ್ನು ಮೊದಲು ಪಾಲಿಸಲಿಕ್ಕೆಬೇಕು ' ಎಂದು ಹೇಳಿದನು ಆಗ ಕುಲೀಖಾನನು ವಿಧಿಚಂದ್ರನಿಗೆ ( ಈ ರಾಜ್ಯವು ಬಾದಶಹನ ಅಪ್ಪಣೆ ಯಮೇರೆಗೆ ಬೀರಬಲನಿಗೆ ಕೊಡಲ್ಪಟ್ಟಿದೆ, ಆದ್ದರಿಂದ ನೀನು ಅವನನ್ನು ಪ್ರ ಸನ್ನಿ ಕರಿಸಿಕೊಂಡರೆ ನಾನು ಹಿಂದಿರುಗಿ ಹೊಗುವೆನು ” ಎಂದು ಹೇಳಲು ವಿಧಿಚಂದ್ರನು ಇದು ಉತ್ತಮವಾದ ಪಕ್ಷವೆಂದು ತಿಳಿದು ಬಿರಬಲನು ಹೆ: ಆದಷ್ಟು ಹಣವನ್ನು ಕೊಟ್ಟು, ಐದಮಣ ಬಂಗಾರವನ್ನು ಬಾದಶಹನಿಗೆ ಕಾಣಿಕೆಯಾಗಿ ಕೊಟ್ಟು ಕಳಿಸಿದನು. ಆ ಸೈನ್ಯದಲ್ಲಿ ಮುಸಲ್ಮಾನ ಜನರೇ ಅಧಿಕರಾಗಿದ್ದರು ಅವರು ಕಾಂ ಗಡಾ ಪ್ರದೇಶದಲ್ಲಿ ಅತಿ ಅತ್ಯಾಚಾರವನು ನಡೆಯಿಸಿದರು ಮಹಾಮಾಯೆ ಯ ದೇವಸ್ಥಾನವನ್ನು ಸುಲಿದು ಪೂಜಾರಿಗಳನ್ನೂ ಬ್ರಾಹ್ಮಣರನ್ನೂ ಬಹು ಸರಿಯಾಗಿ ಪೀಡಿಸಿ ಗೋವಧವನ್ನು ಮಾಡಿ, ಸಾದರ ಕ್ಷಗಳಲ್ಲಿ ಗೊರವ ನ್ನು ತುಂಬಿ, ಪಟ್ಟಣದಲ್ಲಿ ಒಗೆಯಹತ್ತಿದರು ಇದರಿಂದ ಹಿಂದೂ ಜನರು ಬೀರಬಲನನು ಬಹುಪಕಾರವಾಗಿ ನಿಂದಿಸಹತ್ತಿದರು, ಅದರಿಂದ ಬೀರು ಲನಿಗೆ ಬಹುವ್ಯಸನವಾಯಿತು ಅವನು ತಿರುಗಿ ತನ್ನ ಜಹಾಗೀರಿಯ ಪ್ರದೇ ಶಕ್ಕೆ ಹೋಗಲೇ ಇಲ್ಲ, ಅದರಿಂದ ಬಾದಶಹನು ಪಂಜಾಬದಲ್ಲಿ ಕಾಲಿಂಜರ ಪರಗಣೆಯನ್ನು ರಾಜಾ ಬೀರಬಲನಿಗೆ ಜಹಾಗಿರಿಯನ್ನಾಗಿ ಹಾಕಿಕೊ ಟ್ಟನು. ನಗರಕೋಟದಿಂದ ಹೊರಟು ರಾಜಾ ಬಿರಬಲನೂ, ಹುಸೇನ ಕು ಲೀಖಾನನೂ, ಮಿರಜಾ ಇಬ್ರಾಹಿಮನ ಬೆನ್ನು ಹತ್ತಿದರು. ಈ ವಾರ್ತೆಯ ನ್ನು ಕೇಳಿ ಮಿರಜಾ ಇಬ್ರಾಹೀಮನು ಲಾಹೊರಕಡೆಗೆ ಸಾಗಹತ್ತಿದನು ಉಭಯ ಪಕ್ಷದವರಿಗೆ ಮುಲ್ಯಾನದಲ್ಲಿ ಕಾಳಗವಾಯಿತು, ಮಿರಜಾನು ಕಾಳ ಗವನ್ನು ಬಿಟ್ಟು ಪಲಾಯನಮಾಡಿದನು. ಅವನ ತಮ್ಮ ನಾದ ಮಸಾಉ