ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೭೫



ಯಾರು ತಮ್ಮ ಪರಿಚಯವು ಹತ್ತಿದಂತೆ ಆಗುತ್ತದೆ ಆದರೆ ಎಲ್ಲಿ ಎಂಬದು ಗೊತ್ತಾಗಲೊಲ್ಲದು ಎಂದಳು ಆಗ ಬೀರಬಲನು ನಾನು ಬೀರಬಲನು ವೈಕುಂಠದಲ್ಲಿ ಇರುತ್ತೇನೆ ಆದರೆ ಈ ಸಂಗತಿಯನ್ನು ಅನ್ಯರ ಕಿವಿಗೆ ಹಾಕಬೇಡ ಎಂದು ಹೇಳಿ ಹೊರಟುಹೋದನು ಮರುದಿವಸಬಂದು ಅವಳ ಕೈಯಲ್ಲಿ ಎರಡು ರೂಪಾಯಿಗಳನ್ನು ಕೊಟ್ಟನು ಹೀಗೆ ಎರಡು ಮೂರು ದಿವಸ ನಡೆಯಲು ಅವಳು ಈ ಸಂಗತಿಯನ್ನು ಬಾದಶಹನ ಕಿವಿಯಮೇಲೆ ಹಾಕಿದಳು ಆಗ ಬಾದಶಹನು ಪ್ರಸನ್ನನಾಗಿ ಅವಳನ್ನು ಕುರಿತು ಅವನು ನಿನ್ನ ಬಳಿಯಲ್ಲಿ ಬಂದಾಗ ಅವನನ್ನು ನನ್ನೆಡೆಗೆ ಕರೆದುಕೊಂಡು ಬಾ ಎಂದು ಹೇಳಿದನು ನಾಲ್ಕನೇ ದಿವಸ ಪುನಃ ಬೀರಬಲನು ಬರಲು ಕಿಂಚಿತ್ ಅವಕಾಶಮಾಡಿರಿ ? ಬಾದಶಹನು ನಿಮ್ಮನ್ನು ಕರೆದಿದ್ದಾನೆ ಎಂದು ಹೇಳಿದಳು ಆಗ ಬೀರಬಲನು ಈ ದಿವಸ ಬರುವದಕ್ಕೆ ಆಗುವದಿಲ್ಲ ನಾಳೆಯ ದಿವಸ ಬರುತ್ತೇನೆ ಎಂದು ಹೇಳಿದನು ವಚನ ಕೊಟ್ಟಂತೆ ಐದನೇ ದಿವಸಬರಲು ಅವಳು ಬೀರಬಲನನ್ನು ಬಾದಶಹನೆಡೆಗೆ ಕರದೊಯ್ದಳು ಆಗ ಬಾದಶಹನು ಆತಿತುಷ್ಟನಾಗಿ ನೀನು ಈಗ ವೈಕುಂಠದಲ್ಲಿಯೇ ಇದ್ದು ನನಗೆ ಯಾಕ ವೈಕುಂಠ ದರುಶನವನ್ನು ಮಾಡಿಸಲ್ಲ ಈ ಸಾರೆ ನನಗೆ ಅವಶ್ಯವಾಗಿ ದರುಶನ ಮಾಡಿಸಲಿಕ್ಕೇ ಬೇಕು ಎಂದನು ಅದಕ್ಕೆ ಬೀರಬಲನು ಅಲ್ಲಿ ಹೋಗುವದು ಬಹಳ ಕಷ್ಟ ಸಾಧ್ಯವು ಎಂದನು. ಅದಕ್ಕೆ ಬಾದಶಹನು ಬೇಕಾದಷ್ಟು ಕಷ್ಟವಿರಲಿ ! ನಾನು ಬಂದೇ ಬರುತ್ತೇನೆ ನೀನು ಅವಶ್ಯವಾಗಿ ನನ್ನನ್ನು ಕರೆದುಕೊಂಡು ಹೋಗಲಿಕ್ಕೇ ಬೇಕು ಎಂದನು ಆಗ ಬೀರಬಲನು ಒಳ್ಳೇದು ಮಾರ್ಗದಲ್ಲಿ ನಿಮಗೆ ಭೂತ ಪಿಶಾಚಿಗಳು ಬಂದು ಬಾದಶಹರೇ ಎಲ್ಲಿಗೆ ಹೋಗುತ್ತೀರಿ ? ಎಂದು ಪ್ರಶ್ನೆ ಮಾಡುವವು ಹೆದರಿಕೆಯನ್ನು ಹಾಕುವವು ಆದರೆ ಅವು ನಿಮಗೆ ಎಷ್ಟೇ ಪ್ರಶ್ನೆಗಳನ್ನು ಮಾಡಿದರೂ ಸಹ ನೀವು ಒಂದಾದರೂ ಮಾತಾಡ ಕೂಡದು ಮಾತಾಡಿದರೆ ಅವು ನಿಮ್ಮನ್ನು ಕೆಳಗೆ ಚೆಲ್ಲಿಬಿಡುವವು ಎಂದು ಹೇಳಿದನು ಬಾದಶಹನು ಒಪ್ಪಿಕೊಂಡನು ಆಗಬೀರಬಲನು ಬಾದಶಹನ ಕಣ್ಣುಗಳನ್ನು ಕಟ್ಟಿ ಮೋರೆಗೆ ಕಪ್ಪು ಹಚ್ಚಿ ಗಡ್ಡದ ಕೂದಲುಗಳನ್ನು ಕತ್ತರಿಸಿ, ಕತ್ತೆಯಮೇಲೆ ಕುಳ್ಳಿರಿಸಿ ವಿವರದ ಮಾರ್ಗವಾಗಿ ತನ್ನ ಮನೆಗೆ ಕರೆದು ಕೊಂಡು ಹೋಗಿ ಕೆಲವು ಹೊತ್ತು ಅತ್ತ ಇತ್ತ ಸಂಚರಿಸಿ ಪ್ರಾತಃ ಕಾಲ ವಾಗುವದಕ್ಕಿಂತ ಮುಂಚಿತವಾಗಿ ಆ ಗರ್ಧಬದಮೇಲೆ ಕುಳ್ಳಿರಿಸಿ ವಿವರದ ಮಾರ್ಗವಾಗಿ ಬಿಟ್ಟು ಬಿಟ್ಟನು ಆ ಗಾರ್ದಭವು ಸುರಂಗದೊಳಗಿಂದ ಹೊರಬಿದ್ದು ಕೋಟೆಯಲ್ಲಿ ಸಂಚರಿಸಹತ್ತಿತು ಆಗ ವಿದ್ರೂಪಿಯಾಗಿರುವ ಬಾದ