ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೨೯


ಯನ್ನು ತೋರಿಸಿದನು ಆಗ ಚಿತ್ರಕಾರನು ಹಿಂದಕ್ಕೆ ಹೋಗಿ ನಾಲ್ಕಾರು ದಿವಸದಲ್ಲಿ ಮತ್ತೊಂದು ಭಾವಪಟವನ್ನು ಬರೆದುಕೊಂಡು ಬಂದನು ಆಗ ಆ ಸಾವುಕಾರನು ಅದನ್ನು ನಿರೀಕ್ಷಿಸಹತ್ತಲು ಕೈಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಯುಂಟಾಗಿದ್ದಂತೆ ಕಂಡು ಬಂತು ಕೂಡಲೆ ಆಪಟವನ್ನು ಚಿತ್ರಕಾರನಿಗೆ ಕೊಟ್ಟನು ಈಪಕಾರ ಚಿತ್ರಕಾರನು ಅತಿಪ್ರಯಾಸ ಪಟ್ಟು ಸಿದ್ಧಪಡಿಸಿ ಕೊಂಡು ಬಂದಂಥ ಭಾವಚಿತ್ರದಲ್ಲಿ ಯಾವದಾದರೊಂದು ನ್ಯೂನತೆಯನ್ನು ತೋರಿಸ ಹತ್ತಲು. ಚಿತ್ರಕಾರನು ಉತ್ಸಾಹ ಹೀನವಾಗಿ ತನಗೆ ಆಪಯೆಶಸುಂಟಾ ಗುದೆಂಬ ಭೀತಿಯಿಂದ ಯಮುನಾನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿಶ್ಚಯದಿಂದ ಯಮುನಾ ತಟಾಕಕ್ಕೆ ಹೋದನು. ಆಗ ದೈವಸಂಕಲ್ಪದಿಂದ ಬೀರಬಲನೆಂಬ ಒಬ್ಬ ಬಡಬ್ರಾಹ್ಮಣನು ಅಲ್ಲಿಗೆ ಬಂದನು. ವ್ಯಾಕುಲ ಚಿತ್ರನಾದ ಚಿತ್ರಕಾರನನ್ನು ಕಂಡು ಬೀರಬಲನು ಎಲೈ ಸದ್ಗೃಹಸ್ಥನೆ ನೀನು ಇಲ್ಲಿ ಈಪರಿ ಉದಾಸೀನನಾಗಿ ಕುಳಿತ ಕಾರಣವೇ ನು?” ಎಂದು ಪ್ರಶ್ನೆ ಮಾಡಿದನು ಆಗ ಚಿತ್ರಕಾರನು ತನ್ನ ಸಮಗ್ರವೃ ತ್ತಾoತವನ್ನು ಹೇಳಿದನು ಅದಕ್ಕೆ ಬೀರಬಲನು - ನೀನು ಏನೂ ಚಿಂತೆಮಾ ಡಬೇಡ ನಾನು ಆಸಾವುಕಾರನ ಇಚ್ಛಾನುಸಾರವಾಗಿ ಒಂದು ಚಿತ್ರವನ್ನು ಬರೆದು ಕೊಡುವೆನು ನನಗೆ ಒಂದು ಸಾರೆ ಆ ಸಾವುಕಾರನನ್ನು ತೋರಿಸು ಎಂದು ಹೇಳಿದನು.
ಬೀರಬಲನ ಮಾತಿಗೆ ಆಚಿತ್ರಲೇಖಕನು ಸಂತೋಷದಿಂದ ಸಮ್ಮತಿಸಿ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಅಸಾವುಕಾರನ ಬಳಿಗೆ ಹೋ ಗಹತ್ತಿದನು ಆಗ ಬೀರಬಲನು ಪೇಟೆಯಲ್ಲಿ ಒಂದು ದರ್ಪಣವನ್ನು ಕ್ರಯ ಕೈ ತೆಗೆದುಕೊಂಡು ಚಿತ್ರಕಾರನ ಬೆನ್ನು ಹತ್ತಿದನು ಇವರಿಬ್ಬರು ಅಸಾವು ಕಾರನ ಮನೆಯನ್ನು ಹೊಕ್ಕ ಕೂಡಲೆ ಅವನು ಇವರನ್ನು ನೋಡಿ " ಭಾವಪಟವು ಸಿದ್ಧವಾಯಿತೋ??” ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು ಮುಂದೆ ಬಂದು " ಅಹುದು. ಸಿದ್ಧವಾಗಿದೆ ” ಎಂದು ಉತ್ತರ ಕೊಟ್ಟು ತಾನು ತೆಗೆದುಕೊಂಡು ಬಂದ ದರ್ಪಣವನ್ನು ಆಸಾವುಕಾರನ ಎದುರಿಗೆ ಹಿಡಿ ದನು ಕೂಡಲೆ ಅವನ ಪ್ರತಿಬಿಂಬವು ದರ್ಪಣದಲ್ಲಿ ಕಾಣಹತ್ತಿತು ಆಗ ಸಾವುಕಾರನು ನಿರುಪಾಯನಾಗಿ ಆಚಿತ್ರಕಾರನಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಕೊಟ್ಟನು ಅವುಗಳನ್ನು ತೆಗೆದುಕೊಂಡು ಸಂತೋಷದಿಂದ ಚಿತ್ರಕಾರನು ಹೊರಟು ಹೋದನು. ಅವನು ಹೋದ ಮೇಲೆ ಬೀರಬಲನು ಆ ಸಾವುಕಾರನ ಪಾದಗಳಮೇಲೆ ಅಡ್ಡಬಿದ್ದು " ಮಹಾರಾಜ ! ನೀವು ಮ