ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.

ವನ್ನು ನಿನಗೆ ಹ್ಯಾಗೆ ಕೊಡಬೇಕು!” ಎಂದನು. ಆಗ ಅವರಿಬ್ಬರ ನಡುವೆ ವಾದ ವಿವಾದವಾಗಿ ಕಡೆಗೆ ಚಿತ್ರಗಾರನು ಬೀರಬಲನ ಕಡೆಗೆ ಬಂದು ತನ್ನ ಸಂಗತಿಯನ್ನೆಲ್ಲ ಅರಿಕೆಮಾಡಿಕೊಂಡನು, ಆಗ ಬೀರಬಲನು ಚಿತ್ರಗಾರನಿಂದ ಲೇಖಿಸಲ್ಪಟ್ಟ ಐದು ಚಿತ್ರಗಳನ್ನು ಚೆನ್ನಾಗಿ ಪರಿಶೀಲನಮಾಡಿ ನೋಡಿ ಆ ಮನುಷ್ಯನಲ್ಲಿ ತನ್ನ ರೂಪದಲ್ಲಿ ಪರಿವರ್ತನಮಾಡಿಕೊಳ್ಳುವ ಶಕ್ತಿಯುಳ್ಳ ವನಾಗಿರ ಬಹುದೆಂದು ನಿಶ್ಚಯಿಸಿ ಆ ಚಿತ್ರಗಾರನನ್ನು ಕುರಿತು ಅನ್ನುತ್ತಾನೆ;- ನೀನು ಇನ್ನು ಮೂರು ದಿವಸಗಳಾದ ಮೇಲೆ ಒಂದು ನಿಲುಗನ್ನಡಿಯ ನ್ನು ತೆಗೆದುಕೊಂಡು ಆ ಮನುಷ್ಯನ ಹತ್ತಿರಹೋಗು ? ನಾನು ನಿನ್ನ ಬೆಂಬಲಕ್ಕೆ ಇಬ್ಬರು ಜವಾನರನ್ನು ಗುಪ್ತರೀತಿಯಿಂದ ಕಳುಹಿಸಿಕೊಡುವೆನು, ನೀನು ಅವನಬಳಿಗೆ ಹೋಗಿ ಈಸಾರೆ ತಮ್ಮ ಚಿತ್ರವನ್ನು ಸರಿಯಾಗಿ ತೆಗೆದುಕೊಂಡು ಬಂದಿದ್ದೇನೆ ಪರಿಶೀಲಿಸಬೇಕು ಎಂದು ಹೇಳು ? ಎಂದು ಕಳುಹಿಸಿಕೊಟ್ಟನು. ಅದರಂತೆ ಆ ಚಿತ್ರಗಾರನು ಆ ಧನವಂತನ ಬಳಿಗೆ ಹೋಗಿ ದರ್ಪಣವನ್ನು ತೋರಿಸಿದನು, ಆಗ ಆ ಧನವಂತನು ತನ್ನ ರೂಪದಲ್ಲಿ ಹ್ಯಾಗೆ ಹ್ಯಾಗೆ ಪರಿವರ್ತನ ಮಾಡಿಕೊಳ್ಳಹತ್ತಿದನೋ ಹಾಗೆ ಹಾಗೆ ಆ ದರ್ಪಣ ದಲ್ಲಿ ಕಾಣಹತ್ತಿತು. ಆಗ ಆ ಧನವಂತನು ಅನ್ನುತ್ತಾನೆ;- ಏನಯ್ಯಾ ಈ ಬರೀಕನ್ನಡಿಯನ್ನು ನನಗೆ ಯಾಕೆ ತೋರಿಸುತ್ತೀ ? ನೀನು ತೆಗೆದ ಭಾವ ಚಿತ್ರವು ಎಲ್ಲಿ ಅದೆ ? ” ಎಂದು ಕೇಳಿದನು. ಅದಕ್ಕೆ ಚಿತ್ರಗಾರನು ನಿಮ್ಮ ರೂಪ ಸದೃಶವಾದ ಭಾವಚಿತ್ರವೇ ಇದು ? ” ಎಂದು ಹೇಳಿದನು. ಆಗ ಧನವಂತನು “ ನಾನು ನಿನಗೆ ನನ್ನ ಭಾವಪಟವನ್ನು ತೆಗೆಯಲಿಕ್ಕೆ ಎಂದು ಹೇಳಿದ್ದೆನು ? ” ಎಂದು ಕೇಳಿದನು. ಆಗ ಚಿತ್ರಗಾರನು;- “ ನೀವು ಹೀಗೆ ವಚನದಲ್ಲಿ ಯಾಕೆ ಪರಿವರ್ತನ ಮಾಡುವಿರಿ ? ನಾನು ನಿಮ್ಮ ಹೇಳಿಕೆಯಂತೆ ಐದು ಸಾರೆ ಚಿತ್ರವನ್ನು ತೆಗೆದುಕೊಂಡು ಬಂದು ತೋರಿಸಿದನು ಆಗ ನೀವು ಅವುಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ತೋರಿಸಿದ್ದರಿಂದ ಹಿಂದಕ್ಕೆ ತೆಗೆದುಕೊಂಡು ಹೋಗಿ ಈಸಾರೆ ಸ್ವಲ್ಪಾದರೂ ವ್ಯತ್ಯಾಸವಿಲ್ಲದಂತೆ ತೆಗೆದುಕೊಂಡು ಬಂದಿದ್ದೇನೆ ಆದ್ದರಿಂದ ನೀವು ಆಡಿ ಗೊತ್ತು ಮಾಡಿದ ಮೂಲ್ಯವನ್ನು ಕೊಟ್ಟು ಕಳುಹಿಸಬೇಕು ” ಎಂದನು. ಧನವಂತನು ಅವನಮಾತಿಗೆ ಒಪ್ಪಿಕೊಳ್ಳಲಿಲ್ಲ ಆಗ ಕರ್ಮಚಾರಿಗಳಿಬ್ಬರು ಮುಂದೆ ಬಂದು, ಅಯ್ಯಾ ಬ್ರಷ್ಟ ಪ್ರತಿಜ್ಞನಾದ ಶ್ರೀಮಂತನೇ ? ಈ ಮನುಷ್ಯನು ಅತಿಕಷ್ಟಪಟ್ಟು ಐದುಸಾರೆ ತೆಗೆದು ಕೊಂಡುಬಂದ ಚಿತ್ರಗಳನ್ನು ನಿರಾಕರಿಸಿ ಬಿಟ್ಟು ಆರನೇಸಾರೆ ಸರಿಯಾಗಿ ಚಿತ್ರವನ್ನು ಲೇಖಿಸಿಕೊಂಡು ಬಂದು ತೋರಿಸಿದರೂ ನಿರಾಕರಿಸುತ್ತಿರುವಿ