ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಅಕಬರ ಬೀರಬಲ ಚಾತುರryaವಾದ ವಿನೋದ ಕಥೆಗಳು.


ಚ ಭಕ್ಷ್ಯ ಪರಮಾನ್ನದಂತೆಯೂ ನಿದ್ರೆ ಇಲ್ಲದ ಮನುಷ್ಯನಿಗೆ ಹಾಸಿಗೆ ಅಥವಾ ಭೂಮಿ ಇವುಗಳ ಪರಿಜ್ಞಾನವು ಉಂಟಾಗುವದಿಲ್ಲವೋ ತದ್ವತ್ಕಾಮೀ ಪುರುಷನಿಗೆ ಸುಜಾತಿ ಕುಜಾತಿಗಳ ವಿಚಾರವೂ ಬರುವದಿಲ್ಲ ಇಂಥ ವ್ಯಸನಾಧೀನರಾದ ಎಷ್ಟೋ ಜನರನ್ನು ನಾನು ಕಂಡಿದ್ದೇನೆ. ಬಾದಶಹನು ಅನ್ನುತ್ತಾನೆ " ಕದಾಚಿತ್ ಹೀಗಿದ್ದರೂ ಇರಬಹುದು ನೀನು ಇವಳೊಡನೆ ರಮಮಾಣನಾದ ಪುರುಷನನ್ನು ಕಂಡು ಹಿಡಿಯ ಬಲ್ಲೆಯಾ ” ಬೀರಬಲನು ಅನ್ನುತ್ತಾನೆ. " ಕದಾಚಿತ್ ನಾವು ಇಲ್ಲಿಯೇ ಸ್ವಲ್ಪ ಹೊತ್ತು ಸಂಚಾರ ಮಾಡಹತ್ತಿದರೆ, ಅವನು ಯಾರಿರಬಹುದೆಂದು ಸಹಜವೇ ಗೊತ್ತಾಗುವದು "
ಈ ಪ್ರಕಾರ ಅವರಿಬ್ಬರೂ ಮಾತಾಡುತ್ತ ಸ್ವಲ್ಪದೂರ ಹೋದರು ಬೀರಬಲನು ಹಿಂದು ಮುಂದು ನೋಡುತ್ತಾ ಹೋಗುತ್ತಿದ್ದನು ಆರಲ್ಲಿ ಮಾರ್ಗದಲ್ಲಿ ಒಬ್ಬ ನಿಲಾಸಿಯಾದ ಪುರುಷನು ಬರಹತ್ತಿದ್ದನು ಆವನು ಶ್ರೇಷ್ಟ ಕುಲೋತ್ಪನ್ನ ನಾಗಿದ್ದನು, ಆದರೆ ಅತಿವ್ಯಭಿಚಾರಿಯಾಗಿದ್ದನು ಬೀರ ಬಲನು ಅವನನ್ನು ಚೆನ್ನಾಗಿ ನೋಡಿ ಬಾದಶಹನಿಗೆ ಹೇಳುತ್ತಾನೆ, “ಪೃಥ್ವಿ ನಾಥ ಬಹಳಮಾಡಿ ಈ ಮನುಷ್ಯನೇ ಆ ಸ್ತ್ರೀಯೊಡನೆ ಕಾಮವಿಲಾಸವನ್ನು ಅನುಭವಿಸಿದವನಾಗಿರ ಬಹುದೆಂಬಂತೆ ಕಾಣುತ್ತದೆ.
ಬಾದಶಹ- ಅಯಾತರ ಮೇಲಿಂದ !
ಬೀರಬಲ-ಇವನನ್ನು ನೋಡುತ್ತ ಸ್ಪಲ್ಪ ಹೊತ್ತು ಇಲ್ಲಿಯೇ ಗುಪ್ತವಾ ಗಿ ನಿಂತುಕೊಳ್ಳೋಣ ಅಂದರೆ ನಿಜಸ್ಥಿತಿಯು ಹೊರಬೀಳುವದು.
ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಆ ವಿಲಾಸಿ ಪುರುಷನು ಆ ಸ್ತ್ರೀಯಳ ಸಮೀಪಕ್ಕೆ ಹೋಗಿ ಏನೋ ಒಂದು ಸಂಕೇತವನ್ನು ಮಾಡಿ ಮುಂದೆ ಹೋರಟು ಹೋದನು ಅವನು ಮುಂದೆ ಹೋಗಹತ್ತಲು ಆ ಸ್ತ್ರೀಯು ಮೆಲ್ಲಗೆ ಅವನ ಬೆನ್ನು ಹತ್ತಿದಳು ಆಗ ಬಾದಶಹನಿಗೆ ಆ ಸ್ತ್ರೀಯನ್ನು ಅನುಭೋಗಿ ಸಿದ ಪುರುಷನು ಇವನೇ ಇಂದು ನಿಶ್ಚಯವಾಯಿತು.
ಈ ಸಂಗತಿಯು ವಿದಿತವಾದ ಸ್ವಲ್ಪ ಹೊತ್ತಿನ ಮೇಲೆ ಇಬ್ಬರೂ ತಮ್ಮ ತಮ್ಮ ಗೃಹವನ್ನು ಕುರಿತು ಹೊರಟು ಹೋದರು ಮರುದಿವಸದ ಓಲಗದಲ್ಲಿ ಬಾದಶಹನು ಬೀರಬಲನಿಗೆ ಪ್ರಶ್ನೆ ಮಾಡಿದನು - ಬೀರಬಲ, ನೀನು ನಿನ್ನೆ ತೋರಿಸಿದ ಪುರುಷನು ಆ ಸ್ತ್ರೀಯಳನ್ನು ಅನುಭವಿಸಿದವನೆಂದು, ನಿನಗೆ ಹ್ಯಾಗೆ ಗೊತ್ತಾಯಿತು ಅದಕ್ಕೆ ಬೀರಬಲನು ಪೃಥ್ವಿನಾಥ ! ಇದನ್ನು ತಿಳಿದು ಕೊಳ್ಳುವದು ಸ್ವಲ್ಪ ಕಠಿಣವದೆ ! ನಿನ್ನೆ ನಾವಿಬ್ಬರೂ ಅಲ್ಲಿ ನಿಂತು ಕೊಂಡಿರಲು, ದೂರಿನಿಂದ ಬರುತ್ತಿರುವ ಇಲ್ಲಿನಮೇಲೆ ನನ್ನ ದೃಷ್ಟಿಯು