ರವಾದ ಉತ್ತರವನ್ನು ಕೇಳಿ ಬಾದಹನು ತುಷ್ಟನಾದನು.
ಒಂದು ದಿವಸ ಬಾದಶಹನು ಬೀರಬಲನಿಗೆ ಕೇಳುತ್ತಾನೆ;- ಒಬ್ಬಾನೊಬ್ಬಗುರುವು ತನ್ನ ಶಿಷ್ಯನಿಗೆ ನಾಲ್ಕು ಪ್ರಶ್ನೆಗಳನ್ನು ಮಾಡಿದನು ಅದಕ್ಕೆ ಶಿಷ್ಯನು ಒಂದೇ ಉತ್ತರವನ್ನು ಕೊಟ್ಟು ಗುರುವಿನ ಮನಸ್ಸನ್ನು ತೃಪ್ತಿಬಡಿಸಿದನು, ಆ ಪ್ರಶ್ನೆಗಳು ಯಾವವೆಂದರೆ;-
"ವಾನಸಡೈ ಘೋಡಾ ಅಡೈ ವಿದ್ಯಾಬೀಸರ ಜಾಯ
ಜಗರೇಪರಬಾಟ ಜಲೈ ಚೇಲಾಕೌನ ಉಪಾಯ"
ನೀನು ಈ ಪ್ರಶ್ನೆಗಳಿಗೆ ಸರಿಯಾದ ಒಂದೇ ಉತ್ತರವನ್ನು ಕೊಡಬಲ್ಲಿಯಾ ! ಎಂದು ಕೇಳಿದನು ಬೀರಬಲನು ಅಂದದ್ದೇನಂದರೆ - ಪೃಥ್ವೀನಾಥ ಆ ಶಿಷ್ಯನು ಹೇಳಿದ ಉತ್ತರವು ಯಾವದೆಂದರೆ;- “ ಗುರುವರ್ಯ ? ತಿರುಗಾಟವಿಲ್ಲ ?” ಎಂದು ಹೇಳಿದಂತೆ ಕಾಣುತ್ತದೆ.
ಬಾದಕಹನು ಪುನಃ ಪ್ರಶ್ನೆ ಮಾಡುತ್ತಾನೆ; - ಈ ಉತ್ತರದ ವಿವರಣೆಯನ್ನು ಸ್ಪಷ್ಟವಾಗಿ ವಿಕದಪಡಿಸು
ಬೀರಬಲ ಎಲೆಗಳನ್ನು ತಿರುವಿಹಾಕದಿದ್ದರೆ ಕೊಳೆತುಹೋಗುತ್ತವೆ,ಕುದುರೆಯನ್ನು ದಿನಾಲು ತಿರುವದಿದ್ದರೆ ಅದು ಚನ್ನಾಗಿ ನಡೆಯಲಾರದು, ಭೂಮಿಯನ್ನು ಚೆನ್ನಾಗಿ ತಿರುವಿಹಾಕದಿದ್ದರೆ, ಬಿತ್ತಿದ ಪೈರುಗಳು ನಷ್ಟವಾಗಿ ಹೋಗುತ್ತಿವೆ. ವಿದ್ಯೆಯನ್ನು ಮೇಲಿಂದಮೇಲೆ ಪುನಶ್ಚರಣ ಮಾಡದಿದ್ದರೆ ಮರೆತುಹೋಗುತ್ತದೆ. ಬಾರಶಹನು ಬೀರಬಲನ ವಿವರಣೆಯಿಂದ ಹೃಷ್ಟಮಾನಸನಾದನು.
ಒಂದುದಿವಸ ಒಬ್ಬನು ಬಾದಶಹನಿಗೆ ಕೆಲವು ಉತ್ತಮವಾದ ಮಾವಿನ ಹಣ್ಣುಗಳನ್ನು ಕಾಣಿಕೆಯಾಗಿ ಕಳುಹಿಕೊಟ್ಟಿದ್ದನು, ಬಾದಶಹನು ಅವುಗಳಲ್ಲಿಯ ಕೆಲವು ಹಣ್ಣುಗಳನ್ನು ತನ್ನ ರಾಣೀವಾಸದ ಜನರಿಗೆಲ್ಲ ಹಂಚಿಕೊಟ್ಟು ಉಳಿದವುಗಳನ್ನು ತನ್ನ ಮುಖ್ಯ ರಾಣಿಯಬಳಿಗೆ ಕಳುಹಿಕೊಟ್ಟು ಹಿಂದಿನಿಂದ ತಾನೂ ಹೋಗಿ ಇಬ್ಬರೂ ಕೂಡಿಕೊಂಡು ತಿನ್ನ ಹತ್ತಿದರು, ಬಾದಕಹನು ಹಣ್ಣುಗಳನ್ನು ತಿಂದು ಸಿಪ್ಪೆಗಳನ್ನೂ ಬೀಜವನ್ನು ರಾಣಿಯ ಬೆನ್ನ ಹಿಂದೆ ಚೆಲ್ಲಹತ್ತಿದನು, ಅದನ್ನು ರಾಣಿಯುನೋಡಿ ಮನಸ್ಸಿನಲ್ಲಿ "ನನ್ನ ಕಿಂ