ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೮
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಧವಿತ್ತು ದಿವಾನ ಪದವಿಯನ್ನು ಹೊಂದಬೇಕೆಂದು ಬಂದನಾಲ್ಕಾರು ಜನರು ಸಭೆಗೆ ಬಂದರು ಅವರಲ್ಲಿ ಒಬ್ಬನು ಅತಿ ಸಡಿಲವಾದ ಚಲ್ಲಣವನ್ನು ಹಾಕಿ ಕೊಂಡು ಬಿಗಿಯಾಗಿರುವ ಅಂಗಿಯನ್ನು ತೊಟ್ಟುಕೊಂಡಿದ್ದನು. ತಲೆಗೆ ಒಂ ದು ರುಮಾಲವನ್ನು ಒಂದುಕಣ್ಣು ಮುಚ್ಚುವಂತೆ ಸುತ್ತಿಕೊಂಡಿದ್ದನು ಅವನಗಡ್ಡದ ಕೂದಲುಗಳಲ್ಲಿ ಅರ್ಧಕರೇ ಕೂದಲುಗಳೂ, ಅರ್ಧಬಿಳೇಕೂದಲುಗಳೂ ಇದ್ದವು ಮೋರೆಯು ಕಾಂತಿಯುಕ್ತವಾಗಿತ್ತು. ಇಂಥ ಮನುಷ್ಯನನ್ನು ಕಂಡು ದರಬಾರಿಗಳೆಲ್ಲರಿಗೂ ನಗೆಯು ಬರಹತ್ತಿತು ಪರೀಕ್ಷಕರು ಆ ಜನರನ್ನು ಮುಂದಕ್ಕೆ ಕರೆದು ಪ್ರಶ್ನೆಗಳನ್ನು ಮಾಡುತ್ತಿದರು.
ಪ್ರಥಮದಲ್ಲಿ ಜಗನ್ನಾಥ ಪಂಡಿತನು ಪ್ರಶ್ನೆ ಮಾಡಿದನು ಈದಿವಸದ ಸಭೆಯಲ್ಲಿ ನಾವು ಮಾಡಿದ ಯಾವತ್ತು ಪ್ರಶ್ನೆಗಳಿಗೆ ಯಾವನು ಸಮರ್ಪಕವಾದ ಉತ್ತರಗಳನ್ನು ಕೊಡುವನೋ ಅವನಿಗೆ ದಿವಾನ ಪದವಿಯು ಕೊಡಲ್ಪಡುವದು. ನಾನು ಈಗ ಪ್ರಥಮದಲ್ಲಿ ಮಾಡಿದ ಪ್ರಶ್ನೆಗೆ ಉತ್ತರವನ್ನು ಹೇಳದಿದ್ದರೆ, ಅವರಿಗೆ ಎರಡನೇ ಪ್ರಶ್ನೆಯನ್ನು ಕೇಳಲಾರೆವು ನಾನು ಕೇಳುವ ಪ್ರಥಮ ಪ್ರಶ್ನೆಯೇನಂದರೆ “ ಈ ಸೃಷ್ಟಿಯಲ್ಲಿರುವ ಯಾವತ್ತು ಸಮುದ್ರಗಳಲ್ಲಿ ಕೂಡಿ ಎಷ್ಟು ಮುತ್ತಿನ ಸಿಂಪುಗಳಾಗುವವು ?
ಈ ಪ್ರಶ್ನೆ ಉತ್ತರವನ್ನು ಹೇಳಲಿಕ್ಕೆ ಆ ಗಡ್ಡದ ಮನುಷ್ಯನೊಬ್ಬನೇ ಮುಂದೆ ಬಂದು, ಈ ಸಂಸಾರದಲ್ಲಿಯ ಯಾವತ್ತು ಮನುಷ್ಯರ ಕಣ್ಣುಗಳು ಎಷ್ಟು ಸಂಖ್ಯೆಯಾಗುವ ಅಷ್ಟು ನಿಂಪುಗಳು ಸಮುದ್ರದಲ್ಲಿರುವವು ,, ಎಂದು ಉತ್ತರಕೊಟ್ಟನು ಕೂಡಲೆ ಎಲ್ಲ ಕಡೆಯಿಂದಲೂ ವಾಹವಾ ಶಹಬಾಸ, ಧನ್ಯ ಧನ್ಯ,, ಎಂಬ ಆನಂದೋದಾರವು ಕೇಳಬರಹತ್ತಿತು ಆಮೇಲೆ ಜಗನ್ನಾಥ ಪಂಡಿತನು ಎರಡನೇ ಪ್ರಶ್ನೆಯನ್ನು ಮಾಡಿದನು ಶರೀರಕ್ಕೆ ಪ್ರಥಮ ಸುಖವ್ಯಾವದು ? ” " ಆರೋಗ್ಯವು, ಎಂದು ಉತ್ತರಕೊಟ್ಟನು
ಆಮೇಲೆ ಖಾನಖಾನನೆಂಬ್ಬವನು “ಎಲ್ಲಕ್ಕೂ ಶ್ರೇಷ್ಠವಾದ ಶಸ್ತ್ರವು ಯಾವದು ಎಂದು ಹೇಳಿದನು. ಅದಕ್ಕೆ " ಬುದ್ಧಿಯು, ಯಾವತ್ತು ಶಸ್ತ್ರಗ ಳಿಗಿಂತಲೂ ಮಿಗಿಲಾದದ್ದೆಂದು ,, ಉತ್ತರ ಕೊಟ್ಟನು.
ರಾಜಾ ತೋಡರಮಲ್ಲನು (( ತೌಡು, ಮತ್ತು ಮಳಲು, ಎರಡೂ ಒಂದಕ್ಕೊಂದು ಬೆರತುಕೊಳ್ಳಲು ಆ ಮಿಶ್ರಣವನ್ನು ನೀರಿನಲ್ಲಿ ಹಾಕದೆ, ಬೇರೆ ಯಾವ ಉದಾಯದಿಂದ ಪೃಥಕ್ಕರಣ ಮಾಡಲಿಕ್ಕೆ ಬರುವದು ಎಂದು ಕೇಳಿದನು. ಅದಕ್ಕೆ ಅವನು ( ಆಮಿಶ್ರಣವನ್ನು ಭೂಮಿಯ ಮೇಲೆ ಆಗಲವಾಗಿ ಹರವಬೇಕು ಅಂದರೆ ತೌಡನ್ನು ಗುಬ್ಬಿಗಳು ತಿಂದು ಬಿಡುತ್ತವೆ ಕಡೆಗೆ ಮಳಲೇ "